ಕುಂದಗೋಳ : ಬೈಕ್ ಮತ್ತು ಕ್ರೂಸರ್ ವಾಹನದ ಮದ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸೇರಿಸುವ ಮುನ್ನ ಮೃತಪಟ್ಟ ಘಟನೆ ದೇವನೂರು ಕುಂದಗೋಳ ರಸ್ತೆಯ ಮಧ್ಯದಲ್ಲಿಜ.19 ರ ಮಂಗಳವಾರ ಸಂಭವಿಸಿದೆ.
ಮೃತ ವ್ಯಕ್ತಿ ಕೆಇಬಿ ನೌಕರ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಮಹಾಂತೇಶ ರಾಯಪ್ಪ ಒಂಬತ್ತರೊಟ್ಟಿ (27) ಎಂದು ತಿಳಿದು ಬಂದಿದ್ದು, ಇವರು ತನ್ನ ಬೈಕ್ ಮೇಲೆ ದೇವನೂರಿನ ಖಾದರಸಾಬ ಶರೀಫಸಾಬ ಪರೀಟ ಎಂಬುವವರನ್ನು ಬೈಕ್ ಹಿಂದೆ ಕೂಡ್ರಿಸಿ ಕೊಂಡು ಕುಂದಗೋಳದ ಎಡೆಗೆ ಹೊರಟಾಗ ಎದುರಿಗೆ ಬರುತ್ತಿರುವ ಕ್ರೂಸರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
Kshetra Samachara
21/01/2021 01:48 pm