ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಟ್ಕಾ ಉಗುಳಲು ಹೋಗಿ ವ್ಯಕ್ತಿ ಸಾವು

ನರಗುಂದ : ಬೈಕ್ ಮೇಲೆ ಕುಳಿತು ಗುಟ್ಕಾ ಉಗುಳುವಾಗ ಟ್ರ್ಯಾಕ್ಟರ್ ಬಡಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಬಳಿ ನಡೆದಿದೆ.

ಕುರ್ಲಗೇರಿ ನಿವಾಸಿಯಾಗಿರುವ 35 ವಯಸ್ಸಿನ ನಿಂಗಪ್ಪ ಫಕ್ಕಿರಪ್ಪ ಕಳಕನ್ನವರ ಎನ್ನುವವರೇ ಮೃತ ದುರ್ದೈವಿ. ಸುರಕೋಡ ಗ್ರಾಮದಿಂದ ನರಗುಂದಕ್ಕೆ ಬರುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಒಂದೇ ಬೈಕ್ ನಲ್ಲಿ ಮೂವರು ಹೋಗುವಾಗ ಹಿಂದುಗಡೆ ಕುಳಿತ್ತಿದ್ದ ನಿಂಗಪ್ಪ ಗುಟ್ಕಾ ಉಗುಳಲು ಹೋಗಿದ್ದಾನೆ ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರೈಲರ್ ಗೆ ಬಡಿದಿದೆ. ಇನ್ನು ಘಟನೆಯಿಂದ ಇಬ್ಬರು ಬೈಕ್ ಸವಾರರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

20/01/2021 08:00 pm

Cinque Terre

58.25 K

Cinque Terre

9

ಸಂಬಂಧಿತ ಸುದ್ದಿ