ಹುಬ್ಬಳ್ಳಿ: ಧಾರವಾಡ ಜಿಲ್ಲಾಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ಮೃತದೇಹಗಳು ಅದಲು ಬದಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ಅಸ್ಮಿತಾ ಹಾಗೂ ಪರಂಜ್ಯೋತಿ ಎಂಬ ಯುವತಿಯರು ಇದ್ದರು. ಆದರೆ ಅವರ ಮೃತದೇಹ ಗುರುತಿಸುವಲ್ಲಿ ಗೊಂದಲ ಉಂಟಾಗಿ ಪರಂಜ್ಯೋತಿ ಎಂದು ಅಸ್ಮಿತಾ ಮೃತದೇಹವನ್ನು ಪರಂಜ್ಯೋತಿ ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ.
ಆದರೆ ಅಪಘಾತದಲ್ಲಿ ಮಗಳು ಅಸ್ಮಿತಾ ಹಾಗೂ ಅವರ ತಾಯಿ ಹೇಮಲತಾ ಮೃತಪಟ್ಟಿದ್ದರು. ಬಳಿಕ ಅಸ್ಮಿತಾ ಶವವನ್ನು ಹುಡುಕುವಾಗ ಶವ ಅದಲು ಬದಲಾಗಿರುವುದು ಗಮನಕ್ಕೆ ಬಂದಿದೆ. ಅಷ್ಟರಲ್ಲಿಯೇ ಹಾವೇರಿಯ ಬಂಕಾಪುರದವರೆಗೆ ತೆಗೆದುಕೊಂಡು ಹೋಗಲಾಗಿದ್ದ ಅಸ್ಮಿತಾ ಶವವನ್ನು ವಾಪಸ್ ತರಲು ಪೊಲೀಸ್ ಸಿಬ್ಬಂದಿ ಬಂಕಾಪುರಕ್ಕೆ ತೆರಳಿದ್ದಾರೆ.
Kshetra Samachara
15/01/2021 06:17 pm