ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯನ್ನು ಬಲಿ‌ ಪಡೆದ ರೋಡ್ ಹಂಪ್

ಹುಬ್ಬಳ್ಳಿ: ಬೈಕಿನ ಹಿಂಬದಿ‌ ಕುಳಿತ್ತಿದ್ದ‌ ಮಹಿಳೆ ರೋಡ್ ಹಂಪ್ಸ್ ದಾಟುವಾಗ ಕೆಳಗೆ ಬಿದ್ದು ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ನೂಲ್ವಿ ಕ್ರಾಸ್ ಬಳಿ ನಡೆದಿದೆ.

ಶೆರೇವಾಡ ದಿಂದ ಹುಬ್ಬಳ್ಳಿಗೆ ಬರುತ್ತಿದ್ದ ದಂಪತಿಗಳ ಬೈಕ್ ಒಂದು ರೋಡ್ ಹಂಪ್ಸ್ ಹತ್ತಿ ಇಳಿಯುವಾಗ ಬೈಕ್ ನಿಯಂತ್ರಣ ತಪ್ಪಿದ ಕಾರಣ ಹಿಂಬದಿ ಕೂತಿದ್ದ ಮಹಿಳೆ ಕೆಳಗಡೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮೃತಪಟ್ಟ ಮಹಿಳೆ ರೂಪಾ ಸಿದ್ದಪ್ಪ ಶರೇವಾಡ 31 ವಯಸ್ಸಿನ ಮಹಿಳೆಯಾಗಿದ್ದಾಳೆ. ನೂಲ್ವಿ ದನದ ಮಾರುಕಟ್ಟೆ ಬಳಿ ಹೊಸದಾಗಿ ಹಾಕಿದ ರೋಡ್ ಹಂಪ್ಸ್ ನಿಂದಾಗಿ ಈ ಒಂದು ಘಟನೆ ನಡೆದಿದ್ದು,ಈ ರೋಡ್ ಹಂಪ್ಸ್ ನಿಂದ ಪದೇ ಪದೇ ಅಪಘಾತಗಳು ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

12/01/2021 01:36 pm

Cinque Terre

99.89 K

Cinque Terre

22

ಸಂಬಂಧಿತ ಸುದ್ದಿ