ಕುಂದಗೋಳ : ಜಮೀನಿನ ಹೊರ ವಲಯದಲ್ಲಿ ಮೇಯುತ್ತಿದ್ದ ಗರ್ಭ ಧರಿಸಿದ ಹಸುವೊಂದು ಬಾಯಾರಿಕೆಯಿಂದ ನೀರು ಕುಡಿಯಲು ಹೋದಾಗ ಆಕಸ್ಮಿಕ ವಿದ್ಯುತ್ ಅವಘಡಕ್ಕೆ ತುತ್ತಾಗಿ ಅಸುನೀಗಿದ ಘಟನೆ ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸಂಭವಿಸಿದೆ.
ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದ ಮಲ್ಲಪ್ಪ ಈಶ್ವರಪ್ಪ ಸಂಕ್ಲಿಪೂರ ಎಂಬುವವರು ಸಾಕಿದ ಹಸುವೇ ಆಕಸ್ಮಿಕ ವಿದ್ಯುತ್ ಅವಘಡಕ್ಕೆ ತುತ್ತಾಗಿ ಅಸುನೀಗಿದ್ದು ಘಟನೆಗೆ ಸೂಕ್ತ ಕಾರಣ ಇನ್ನು ತಿಳಿದು ಬಂದಿಲ್ಲ. ಘಟನೆಯ ದೃಶ್ಯಾವಳಿಗಳನ್ನು ಗ್ರಾಮಸ್ಥರೇ ಪಬ್ಲಿಕ್ ನೆಕ್ಸ್ಟ್ ನೀಡಿದ್ದಾರೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Kshetra Samachara
10/01/2021 03:31 pm