ಹಾವೇರಿ : ಹೋರಿ ಬೆದರಿಸು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕೊಬ್ಬರಿ ಹೋರಿ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ನಡೆದಿದೆ.
ಮಿಂಚಿನ ಓಟ ಓಡುತ್ತಲೇ ಕೆರೆಗೆ ಬಿದ್ದ ವರದನಾಯಕ ತನ್ನ ಪ್ರಾಣವನ್ನೆ ಕಳೆದುಕೊಂಡಿದ್ದಾನೆ. ಇನ್ನೂ ಪ್ರಾಣ ಉಳಿಸಿಕೊಳ್ಳಲು ಹೋರಿಯು ಹರಸಾಹಸ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ಇತ್ತ, ಹೋರಿ ಅಭಿಮಾನಿಗಳ, ಕಣ್ಣುಮುಂದೆ ತಮ್ಮ ನೆಚ್ಚಿನ ಹೋರಿ ವರದನಾಯಕನನ್ನು ಕಳೆದುಕೊಂಡ ದುಃಖ ಭರಿತರಾಗಿದ್ದಾರೆ. ವರದನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
Kshetra Samachara
28/12/2020 01:51 pm