ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಆಗ್ರಹಿಸಿ ಪ್ರತಿಭಟನೆ

ನವಲಗುಂದ : ಪಟ್ಟಣದಲ್ಲಿ ಹಾದು ಹೋಗುವ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಈ ಹಿನ್ನೆಲೆ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಆದಿಜಾಂಬವ ಯುವ ಸಮಿತಿ ತಾಲೂಕ ಅಧ್ಯಕ್ಷ ಶಿವು ಪೂಜಾರ ಅವರ ನೇತೃತ್ವದಲ್ಲಿ ಪಟ್ಟಣದ ಶಲವಡಿ ಕ್ರಾಸ್ ಬಳಿ ಧರಣಿ ಕೂರುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಹೌದು ದಿನೇ ದಿನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಹಿನ್ನೆಲೆ ಶಲವಡಿ ಕ್ರಾಸ್, ನರಗುಂದ ಕ್ರಾಸ್, ಅಣ್ಣಿಗೇರಿ ಕ್ರಾಸ್, ಪಟ್ಟಣದ ಶೆಟ್ಟರ್ ಕೆರೆ ಬಳಿ, ಬೆಳವಟಗಿ ಕ್ರಾಸ್ ಗಳಲ್ಲಿ ರೋಡ್ ಹಂಪ್ ಗಳನ್ನು ಅಳವಡಿಸಬೇಕು ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಯುವ ಸಮಿತಿ ತಾಲೂಕ ಅಧ್ಯಕ್ಷ ಶಿವು ಪೂಜಾರ ಅವರ ನೇತೃತ್ವದಲ್ಲಿ ಆಗ್ರಹಿಸಿ, ತಹಶೀಲ್ದಾರ್ ಮತ್ತು ಪಿಎಸ್ಐ ಕಲ್ಮೇಶ ಬೆನ್ನೂರ ಅವರಿಗೆ ಮನವಿ ನೀಡಿದರು.

Edited By : PublicNext Desk
Kshetra Samachara

Kshetra Samachara

08/01/2022 09:01 am

Cinque Terre

24.96 K

Cinque Terre

1

ಸಂಬಂಧಿತ ಸುದ್ದಿ