ಕಲಘಟಗಿ:ಪಟ್ಟಣದ ಕೆರೆಯ ಪಕ್ಕದ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ.
ಪಟ್ಟಣದ ಪ್ರಕಾಶ ಧೂಪದ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಾನಿಯಾಗಿದೆ.
ಜೋತು ಬಿದ್ದ ವಿದ್ಯುತ್ ತಂತಿಯಿಂದ ಅಗ್ನಿ ಅವಘಡ ಸಂಭವಿಸಿದೆ ಹಾಗೂ ಹಲವು ಬಾರಿ ಹೆಸ್ಕಾಂಗೆ ದೂರು ನೀಡಿದರೂ ವಿದ್ಯುತ್ ತಂತಿ ಸರಿಪಡಿಸದೇ ಈ ಅವಘಡವಾಗಿದೆ ಎಂದು ಪ್ರಕಾಶ ಧೂಪದ ಆರೋಪಿಸಿದ್ದಾರೆ.
Kshetra Samachara
20/12/2020 05:47 pm