ಹುಬ್ಬಳ್ಳಿ: ಬಿಡಾಡಿ ದನಗಳ ಹಾವಳಿ ಎಷ್ಟಾಗಿದೆ ಅಂದ್ರೇ ಈ ಬಿದಿ ದನಗಳು ಯಾವ ಸಂದರ್ಭದಲ್ಲಿ ಯಾರ ಜೀವ ತೆಗೆಯುತ್ತವೆಯೋ ಗೊತ್ತಿಲ್ಲ. ಇಂತಹದೇ ಒಂದು ಅಹಿತಕರ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ಬಿದಿ ದನಗಳ ಕಾರ್ಯಾಚರಣೆ ಮಾಡಿ ಎಂದು ಹು-ಧಾ ಮಹಾನಗರ ಪಾಲಿಕೆಗೆ ಗಮನಕ್ಕೆ ತಂದರೂ ಕೂಡ ಮಹಾನಗರ ಪಾಲಿಕೆ ಮಾತ್ರ ನಾಮಕಾವಸ್ತೆ ಕಾರ್ಯಾಚರಣೆ ಮಾಡಿ ಗೋ ಶಾಲೆಗೆ ಕರೆದುಕೊಂಡು ಹೋಗುವ ನೆಪ ಹೇಳುತ್ತಿದೆ.ಆದರೇ ಯಶಸ್ವಿ ಕಾರ್ಯಾಚರಣೆ ಮಾತ್ರ ಆಗುತ್ತಿಲ್ಲ.
ಹುಬ್ಬಳ್ಳಿ ಘಂಟಿಕೇರಿ ಪೊಲೀಸ್ ಠಾಣೆಯ ಹತ್ತಿರ ಬಿಡಾಡಿ ದನಗಳು ಗುದ್ದಾಡುತ್ತ ದಾರಿಯಲ್ಲಿ ಹೋಗುವವರ ಮೇಲೆಯೇ ದಾಳಿ ಮಾಡುತ್ತಿದ್ದು,ಇಂದು ಅದೇ ರೀತಿ ಇಂದು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ದನಗಳು ದಾಳಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು,ಗೂಳಿಗಳು ಕಾಳಗಕ್ಕೆ ಮುಂದಾಗಿ ದಾರಿಹೋಕನ ಮೇಲೆ ದಾಳಿ ನಡೆಸಿವೆ.
ಇಂತಹ ಅದೆಷ್ಟೋ ಘಟನೆಗಳು ಹು-ಧಾ ಅವಳಿನಗರದಲ್ಲಿ ನಡೆಯುತ್ತಿದ್ದು,ಹು-ಧಾ ಮಹಾನಗರ ಪಾಲಿಕೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Kshetra Samachara
07/12/2020 03:35 pm