ಹುಬ್ಬಳ್ಳಿ: ಬಸ್ ಒಂದು ಪ್ಲೈ ಓವರ್ ಮೇಲೆ ಸ್ಪೋಟ್ ಗೊಂಡಿದ್ದು,ಅದನ್ನು ಸಾರ್ವಜನಿಕರು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆ ಹುಬ್ಬಳ್ಳಿಯ ಉಣಕಲ್ ಹತ್ತಿರದ ಪ್ಲೈ ಓವರ್ ನಲ್ಲಿ ಚಿಗರಿ ಬಸ್ ಸ್ಪೋಟಗೊಂಡಿದೆ ಎಂದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು,ಜನರು ಆತಂಕ ಪಡುವಂತೇ ಹುಬ್ಬಳ್ಳಿಯಲ್ಲಿ ಯಾವುದೇ ಬಸ್ ಕೂಡ ಸ್ಪೋಟಗೊಂಡಿಲ್ಲ.
ಸಂಜೆಯ ವೇಳೆಯಲ್ಲಿ ಚಿಗರಿ ಬಸ್ ಸ್ಪೋಟಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು,ಹು-ಧಾ ಅವಳಿನಗರದ ಜನತೆಯ ನಿದ್ದೆಗೆಡೆಸಿದೆ.ಆದರೆ ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು,ಹು-ಧಾ ಅವಳಿನಗರದ ಜನರು ಆತಂಕ ಪಡುವ ಅಗತ್ಯವಿಲ್ಲ.
Kshetra Samachara
06/12/2020 10:06 pm