ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚಲಿಸುತ್ತಿದ್ದ ಬುಲೆರೊ ವಾಹನದಲ್ಲಿ ಬೆಂಕಿ

ಧಾರವಾಡ: ಚಲಿಸುತ್ತಿದ್ದ ಬುಲೆರೊ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ರಾಯಾಪುರದ ಬಳಿ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಧಾರವಾಡದ ಕಡೆ ಈ ಬುಲೆರೊ ವಾಹನ ಬರುತ್ತಿತ್ತು. ರಾಯಾಪುರದ ಬಳಿ ಬರುತ್ತಿದ್ದಂತೆ ವಾಹನದಲ್ಲಿ ಬೆಂಕಿ ಕಾಣಿಸಿದ್ದರಿಂದ ಆತಂಕಗೊಂಡ ಚಾಲಕ ಅದನ್ನು ನಂದಿಸಲು ಪ್ರಯತ್ನಿಸಿದ್ದಾರೆ.

ಬೆಂಕಿ ತೀವ್ರವಾಗಿ ಹೊತ್ತುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದರಿಂದ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Edited By : Nirmala Aralikatti
Kshetra Samachara

Kshetra Samachara

03/12/2020 05:05 pm

Cinque Terre

51.13 K

Cinque Terre

2

ಸಂಬಂಧಿತ ಸುದ್ದಿ