ಅಣ್ಣಿಗೇರಿ : ಅಪಘಾತಕ್ಕೊಳಗಾಗಿದ್ದ ತಾಲೂಕಿನ ಬೆಳಹಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಸ್ಮಿತಾ ಕಟ್ಟಿ (30) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಡಾ. ಸ್ಮಿತಾ ಕಟ್ಟಿ ಅವರು ಕಳೆದ ಶನಿವಾರ ಭಂಡಿವಾಡ ಹತ್ತಿರ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಡಾ. ಸ್ಮಿತಾ ಕಟ್ಟಿ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಸ್ಥಳದಲ್ಲೇ ಡಾ. ಸ್ಮಿತಾ ಅವರ ತಾಯಿ ಶೋಭಾ ಹಾಗೂ ವಾಹನ ಚಾಲಕ ಮೃತ ಪಟ್ಟಿದ್ದರು. ಡಾ. ಸ್ಮಿತಾ ಕಟ್ಟಿ ಅವರ ಅಕಾಲಿಕ ಸಾವಿಗೆ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಂಬನಿ ಮಿಡಿದ್ದಾರೆ.
Kshetra Samachara
28/11/2020 09:23 am