ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಈಜಲು ಹೋಗಿ ನೀರುಪಾಲಾದ ಯುವಕನ ಮೃತದೇಹ ಪತ್ತೆ

ಲಕ್ಷ್ಮೇಶ್ವರ: ಪಟ್ಟಣದ ಅಗಸ್ತ್ಯತೀರ್ಥದ ಬಾವಿಯಲ್ಲಿ ಈಜಲು ಹೋದ ಯುವಕ ನೀರುಪಾಲು ಆಗಿರುವ ಘಟನೆ ಗುರುವಾರ ನಡೆದಿತ್ತು.ಅಗ್ನಿಶಾಮಕ ದಳದವರು ಇಡಿ ದಿನ ಶೋಧಕ ಕಾರ್ಯಚರಣೆ ಮಾಡಿದರು.ಮೃತ ದೇಹ ಸಿಕ್ಕಿರಲಿಲ್ಲ ಆದರೇ ಯುವಕ ಮೃತ ದೇಹ ಬಾವಿಯಲ್ಲಿ ತಾನಾಗಿಯೇ ಮೇಲೆ ಬಂದಿದೆ.

ಹೌದು..ಪಟ್ಟಣದ ಅಗಸ್ತ್ಯತೀರ್ಥ ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ಹರ್ಷವರ್ಧನ ದುರ್ಗೆಶ ಅರಕೇರಿ ಎಂಬುವರು ಶುಕ್ರವಾರ ಬಾವಿಯಲ್ಲಿ ತಾನಾಗಿಯೇ ಮೃತದೇಹ ಬಂದಿದೆ. ದೀಪಾವಳಿಗೆ ಬ್ಯಾಡಗಿದಿಂದ ಲಕ್ಷ್ಮೇಶ್ವರ ಪಟ್ಟಣ ಸಂಬಂಧಿಕರ ಮನೆಗೆ ಬಂದಿದ್ದ ಈಜಲು ಬಾವಿಯಲ್ಲಿಯೇ ಮುಳಗಿದ್ದಾನೆ ನಂತರ ರಸ್ತೆಯ ಪಕ್ಕದಲ್ಲಿ ಓಡಾಡುವ ಸಾರ್ವಜನಿಕರು ಯುವಕರು ಓಡುತ್ತಿದ್ದನ್ನು ನೋಡಿ ಬಾವಿಯ ಬಳಿಗೆ ಬಂದಿದ್ದಾರೆ.ಬಾವಿಯ ದಡದ ಮೇಲೆ ಅವನ ಬಟ್ಟೆ ಚಪ್ಪಲಿಗಳು ನೋಡಿದರಿಂದ ಯುವಕ ಮುಳಗಿದ್ದಾನೆ ಎಂದು ಓಣಿಯ ಜನರು ಹಾಗೂ ಸಂಬಂಧಿಕರು ಓಡಿ ಬಂದಾಗ ಅವನ ಬಟ್ಟೆಗಳು ನೋಡಿ ನಮ್ಮ ಹುಡುಗ ಎಂದು ಹೇಳಿದ್ದರು‌.ಅಲ್ಲದೇ ಇಡಿ ದಿನ ಕಾರ್ಯಾಚರಣೆ ನಡೆಸಿದರು ಕೂಡ‌ ಯುವಕನ ದೇಹ ಸಿಕ್ಕಿರಲಿಲ್ಲ.ಇಂದು ತಾನಾಗಿಯೇ ಮೃತದೇಹ ಹೊರಬಂದಿದೆ.ಇನ್ನೂ ಅಗಸ್ತ್ಯತೀರ್ಥ ಬಾವಿಗೆ ಮೃತ ದೇಹ ನೋಡಲು ಸಾರ್ವಜನಿಕರ ದಂಡೆ ಆಗಮಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

20/11/2020 12:06 pm

Cinque Terre

46.26 K

Cinque Terre

1

ಸಂಬಂಧಿತ ಸುದ್ದಿ