ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗೋವಿನ ಜೋಳದ ಬಣವೆಗೆ ಬೆಂಕಿ ಇಟ್ಟರು:ಇತ್ತ ರೈತ ಮಹಿಳೆ‌ಯ ಕಣ್ಣಿರು‌

ಕಲಘಟಗಿ:ತಾಲೂಕಿನ‌ ಜಿನ್ನೂರ ಗ್ರಾ ಪಂ ವ್ಯಾಪ್ತಿಯ ಮಲಕನಕೊಪ್ಪ ಗ್ರಾಮದಲ್ಲಿ ರೈತ ಮಹಿಳೆ ಸಂಗ್ರಹಿಸಿಟ್ಟಿದ್ದ ಗೋವಿನ‌ ಜೋಳದ ಬೆಳೆಯ ಬಣವೆಗೆ ಅಪರಿಚಿತರು ರಾತ್ರಿ ವೇಳೆ ಬೆಂಕಿ ಹಚ್ಚಿದ ಪರಿಣಾಮ ಅಪಾರ ನಷ್ಟ ಉಂಟಾದ ಘಟನೆ ಜರುಗಿದೆ.

ಗ್ರಾಮದ ಬಡ ರೈತ ಮಹಿಳೆ

ಬಸವಣ್ಣೆವ್ವ ಬಸಪ್ಪ ತೆಗ್ಗಿನಮನಿ ಅವರು ಎರಡು ಎಕರೆಯಲ್ಲಿ ಬೆಳೆದ ಗೋವಿನ ಜೋಳದ ಬೆಳೆಯ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ.ಅಂದಾಜು ಒಂದು ಲಕ್ಷರೂಪಾಯಿ ಹಾನಿಯಾಗಿದೆ.ಗುರುವಾರ ಬೆಳಗಿನ ಜಾವ ಹೊಲಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಸಾಲ ‌ಮಾಡಿ ಶ್ರಮಪಟ್ಟು ಬೆಳೆದ ಬೆಳೆ ಸುಟ್ಟು ಕರಕಲಾಗಿರುವುದರಿಂದ ಬಡ ರೈತ ‌ಮಹಿಳೆ ಹಾಗೂ ಅವರ ಕುಟುಂಬ ನೊಂದುಕೊಂಡು ಕಣ್ಣಿರಿಟ್ಟಿದ್ದಾರೆ.ಸರಕಾರ ರೈತನಿಗೆ ಪರಿಹಾರ ನೀಡ ಬೇಕು ಎಂದು ಸುಭಾಸ ಮಡ್ಲಿ ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

19/11/2020 09:21 am

Cinque Terre

42.29 K

Cinque Terre

0

ಸಂಬಂಧಿತ ಸುದ್ದಿ