ಕಲಘಟಗಿ: ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ಪಟಾಕಿಯ ಕಿಡಿ ತೆಂಗಿನ ಮರಕ್ಕೆ ಸಿಡಿದ ಪರಿಣಾಮ ತೆಂಗಿನಮರ ಸುಟ್ಟು ಕರಕಲಾಗಿದೆ.
ಸೋಮವಾರ ರಾತ್ರಿ ದೀಪಾವಳಿ ಹಬ್ಬದ ನಿಮಿತ್ತ ಗ್ರಾಮದಲ್ಲಿ ಯುವಕರು ಪಟಾಕಿಸಿಡಿದ್ದರು.ಗ್ರಾಮದ ಚನ್ನಬಸಪ್ಪ ಬಡಿಗೇರ ಎಂಬುವವರಿಗೆ ಸೇರಿದ ತೆಂಗಿನ ಮರಕ್ಕೆ ಪಟಾಕಿಯ ಕಿಡಿ ತಗುಲಿ ಧಘ ಧಘನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟಿದ್ದು,ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಕಿಡಿ ಬಿದ್ದಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಬಾರೀ ಅವಘಡ ತಪ್ಪಿದೆ.
Kshetra Samachara
17/11/2020 08:38 am