ಧಾರವಾಡ: ಕಾರೊಂದರ ಟೈರ್ ಬ್ಲಾಸ್ಟ್ ಆಗಿ ಅದು ಬ್ರಿಜ್ ಮೇಲಿಂದ ಕೆಳಗೆ ಬಿದ್ದ ಘಟನೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಬಳಿ ಸವದತ್ತಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಗೋಕಾಕ ಮೂಲದ ವ್ಯಕ್ತಿಯೊಬ್ಬರು ತನ್ನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗುವನ್ನು ಕರೆದುಕೊಂಡು ಧಾರವಾಡಕ್ಕೆ ಬಂದಿದ್ದರು. ಮರಳಿ ಗೋಕಾಕ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರು ಮರೇವಾಡ ಟೋಲ್ ಬಳಿ ಇರುವ ಬ್ರಿಜ್ ನಿಂದ ಕೆಳಗೆ ಬಿದ್ದಿದೆ.
ಕಾರು ಸ್ಪೀಡಾಗಿತ್ತು. ಒಮ್ಮಿಂದೊಮ್ಮೆಲೆ ಅದು ಬ್ರಿಜ್ ನಿಂದ ಸಿನಿಮೀಯ ರೀತಿಯಲ್ಲಿ ಕಂದಕಕ್ಕೆ ಹಾರಿತು. ಕೂಡಲೇ ನಾವೂ ಸಹ ಕೆಳಗಿಳಿದು ಆ ಕಾರಿನಲ್ಲಿದ್ದ ಮಗು ಸೇರಿದಂತೆ ಮೂರು ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಕಾರು ಕೆಳಗೆ ಬೀಳುತ್ತಿದ್ದಂತೆ ಜನ ಸೇರಿ ಉಲ್ಟಾ ಆಗಿ ಬಿದ್ದಿದ್ದ ಕಾರನ್ನು ಸೀದಾ ನಿಲ್ಲಿಸಿ ಮೂರೂ ಜನರನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Kshetra Samachara
13/10/2020 07:09 pm