ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಈಜಲೆಂದು ಹೋದವ ಮಸಣ ಸೇರಿದ

ಧಾರವಾಡ: ಧಾರವಾಡದ ಕೆಲಗೇರಿ ಕೆರೆಯಲ್ಲಿ ಯುವಕನೋರ್ವ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೂರು ಜನ ಯುವಕರು ಸೇರಿ ಬುಧವಾರ ಮಧ್ಯಾಹ್ನ ಈಜಲು ಕೆಲಗೇರಿ ಕೆರೆಗೆ ತೆರಳಿದ್ದರು. ಈ ವೇಳೆ ನಂದೀಶ್ ಗಾಣಿಗೇರ (18) ಎಂಬ ಯುವಕ ಈಜಲು ಬರದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಯುವಕ ರವಿವಾರ ಪೇಟೆ ನಿವಾಸಿ ಎಂದು ಗೊತ್ತಾಗಿದ್ದು, ಉಪನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ಬೆಳಿಗ್ಗೆಯಿಂದ ಮೃತದೇಹದ ಪತ್ತೆಗಾಗಿ ಶೋಧ ನಡೆಸುತ್ತಿದ್ದು, ಇನ್ನೂ ಮೃತದೇಹ ಪತ್ತೆಯಾಗಿಲ್ಲ

Edited By :
Kshetra Samachara

Kshetra Samachara

08/10/2020 07:50 pm

Cinque Terre

81.2 K

Cinque Terre

0

ಸಂಬಂಧಿತ ಸುದ್ದಿ