ಬೆಳಗಾವಿ: ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ನಿಗೂಢವಾಗಿಯೇ ಮೃತಪಟ್ಟಿದ್ದಾರೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದಲ್ಲಿ ನಡೆದಿದೆ.
13 ತಿಂಗಳ ಮಗು ಪವಿತ್ರಾ ಹುಗೂರ್, 14 ತಿಂಗಳ ಮಗು ಉಮೇಶ್ ಕುರಗುಂದಿ ಹಾಗೂ ಜನವರಿ 13 ರಂದು ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ ಚೇತನ ಹೆಸರಿನ ಮಗು ಮೃತಪಟ್ಟಿದೆ.
ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಏಕಕಾಲಕ್ಕೆ ಕೋವಿಡ್ ವ್ಯಾಕ್ಸಿನ್ ಮತ್ತು ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚುಚ್ಚುಮದ್ದು ನೀಡಿದ ಬಳಿಕ ಮಕ್ಕಳಿಗೆ ವಾಂತಿ-ಭೇದಿ ಆರಂಭವಾಗಿದೆ ಅಂತಲೂ ಆರೋಪಿಸಲಾಗಿದೆ. ಕುಟಕೋಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
16/01/2022 03:45 pm