ಹಸಿ ಪರಂಗಿ ಅಥವಾ ಪರಂಗಿಕಾಯಿ
ಮಲಬದ್ಧತೆ ಸಮಸ್ಯೆ ಇರುವವರು ಹಾಗೂ ಆಗಾಗ ಕಿಬ್ಬೊಟ್ಟೆನೋವು ಅನುಭವಿಸುತ್ತಿರುವವರು ಪರಂಗಿ ಕಾಯಿಯ ಜ್ಯೂಸ್ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಚಿಟಿಕೆ ಉಪ್ಪು ಮಿಶ್ರಣ ಮಾಡಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.
ನೇರಳೆ ಹಣ್ಣು
ಪ್ರತಿದಿನ ಎರಡರಿಂದ ಮೂರು ನೇರಳೆಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕರುಳಿನ ಭಾಗದಲ್ಲಿ ನೆರಳೆ ರಸ ನಿಮ್ಮ ಮಲವನ್ನು ಮೃದುವಾಗಿಸಿ ಕೇವಲ ಕೆಲವೇ ಗಂಟೆಗಳಲ್ಲಿ ನಿಮಗೆ ಮಲವಿಸರ್ಜನೆ ಆಗುವಂತೆ ಮಾಡುತ್ತದೆ.
ಇದರಲ್ಲಿರುವ ಅತಿಯಾದ ನಾರಿನ ಅಂಶ ಇದಕ್ಕೆಲ್ಲ ಪ್ರಮುಖ ಕಾರಣ ಎಂದು ಹೇಳಬಹುದು.
ಜೀರಿಗೆ
ಜೀರಿಗೆ ವಿಶೇಷ ಫ್ಲೇವರ್ ಹೊಂದಿದ್ದು,ಮಲಬದ್ಧತೆ ಸಮಸ್ಯೆಗೆ ಒಳ್ಳೆಯ ಮನೆಮದ್ದು.ಜೀರಿಗೆ ತೀವ್ರವಾದ ಜೀರ್ಣಕಾರಿ ಅಸ್ವಸ್ಥತೆಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
ಹೇಗೆ ಸೇವಿಸಬೇಕು?
ಮಲಬದ್ಧತೆ ನಿವಾರಣೆಗಾಗಿ , 1 ಟೀಸ್ಪೂನ್ ಜೀರಿಗೆಯನ್ನು ಕಂದು ಬಣ್ಣ ಬರುವವರೆಗೆ ಹುರಿದು, ಚೆನ್ನಾಗಿ ಪುಡಿಮಾಡಿ. ನಂತರ ಪುಡಿಯನ್ನು ನೀರು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸಿ.
ಶುಂಠಿ
ಶುಂಠಿ ಬಳಕೆಯಿಂದ ಕರುಳಿನ ಚಲನೆ ಉತ್ತಮವಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಸರಿಯಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
ಬೆಳಗಿನ ಸಮಯದಲ್ಲಿ ನಿಮ್ಮ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನವೂ ಕನಿಷ್ಠ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ದಿನದಲ್ಲಿ ಆಗಾಗ ಸುಮಾರು ಎರಡು - ಮೂರು ಲೀಟರ್ ನೀರು ಕುಡಿಯುತ್ತಿರಿ.
ಕೆಂಪು ಮಾಂಸವನ್ನು ಜಾಸ್ತಿ ಸೇವಿಸುವುದರಿಂದ ಮಲಬದ್ಧತೆಯಾಗಬಹುದು. ಏಕೆಂದರೆ ಇದರಲ್ಲಿ ಕೊಬ್ಬು ಮತ್ತು ಕಬ್ಬಿಣ ಅಧಿಕವಾಗಿರುತ್ತದೆ.
ಚಿಪ್ಸ್ ತೂಕವನ್ನು ಹೆಚ್ಚಿಸುವುದರ ಜೊತೆಗೆ ಮಲಬದ್ಧತೆ ಉಂಟು ಮಾಡುತ್ತವೆ.
ಎನರ್ಜಿ ಡ್ರಿಂಕ್ಸ್, ಬ್ಲ್ಯಾಕ್ ಕಾಫಿ, ಕೆನೆ ಕಾಫಿ, ಡೆಕಾಫ್ ಕಾಫಿ, ಟೀ, ಕ್ರೀಮ್ ಟೀ, ಹಾಟ್ ಚಾಕೋಲೆಟ್, ಸೋಡಾ ಇತ್ಯಾದಿ ಕೆಫೀನ್ ಹೊಂದಿರುವ ಪಾನೀಯಗಳನ್ನು ಅಧಿಕವಾಗಿ ಸೇವಿಸಿದಾಗ ಮಲಬದ್ದತೆ ಬರುತ್ತದೆ.
PublicNext
17/11/2021 08:54 pm