ಮುಂಬೈ: ಕೇರಳ ಬೆನ್ನಲ್ಲೇ ಮಹಾರಾಷ್ಟ್ರಕ್ಕೂ ಝೀಕಾ ವೈರಸ್ ಕಾಲಿಟ್ಟಿದೆ. ಪುಣೆಯ ಮಹಿಳೆಯೋರ್ವರಲ್ಲಿ ಝೀಕಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಸೋಂಕಿನಿಂದ ಮಹಿಳೆ ಗುಣಮುಖರಾಗಿದ್ದಾರೆ.
ಪುಣೆಯ ಪುರಂದರ್ ತೆಹ್ಸಿಲ್‌ನ ಬೆಲ್ಸಾರ್ ಗ್ರಾಮದ 50 ವರ್ಷದ ಮಹಿಳೆಯೋರ್ವರಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿತ್ತು. ಅವರು ಚೇತರಿಸಿಕೊಂಡಿದ್ದು, ಅವರ ಕುಟುಂಬದ ಸದಸ್ಯರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎನ್ನಲಾಗಿದೆ.
ಮಹಿಳೆಗೆ ಝೀಕಾ ಸೋಂಕಿನ ಜೊತೆಗೆ ಚಿಕುನ್ಗೂನ್ಯ ಸೋಂಕು ಸಹ ಕಂಡುಬಂದಿತ್ತಂತೆ. ಗ್ರಾಮಕ್ಕೆ ಸರ್ಕಾರಿ ಮೆಡಿಕಲ್ ಟೀಂ ಭೇಟಿ ನೀಡಿ ಗ್ರಾಮದ ಪಂಚಾಯತ್ ಸದಸ್ಯರನ್ನು ಭೇಟಿಯಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
PublicNext
01/08/2021 04:44 pm