ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯ ಸಿಬ್ಬಂದಿ ಎಡವಟ್ಟು : ಪೋಲಿಯೋ ಡ್ರಾಪ್ಸ್ ಬದಲು ಕಂದನ ಬಾಯಿಗೆ ಬಿತ್ತು ಸ್ಯಾನಿಟೈಸರ್

ಯವತ್ಮಲ್ಮ (ಮಹಾರಾಷ್ಟ್ರ) : ಮಕ್ಕಳಿಗೆ ಪೋಲಿಯೊ ಲಸಿಕೆ ಹನಿ ಬದಲು ಹ್ಯಾಂಡ್ ಸ್ಯಾನಿಟೈಸರ್ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಯವತ್ಮಲ್ಮ ಜಿಲ್ಲೆಯ ಕ್ಯಾಪ್ಸಿಕೊಪ್ರಿಯಲ್ಲಿ ಆರೋಗ್ಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ 12 ಮಕ್ಕಳು ಪ್ರಾಣವನ್ನೇ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗಿದೆ.

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ವೇಳೆ, ಸಿಬ್ಬಂದಿ 12 ಮಕ್ಕಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ನೀಡಿದ್ದಾರೆ ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.ಅದೃಷ್ಟವಶಾತ್ ಮಕ್ಕಳ ಪ್ರಾಣಕ್ಕೆ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಓರ್ವ ಆರೋಗ್ಯ ಸಿಬ್ಬಂದಿ, ಓರ್ವ ವೈದ್ಯ ಹಾಗೂ ಆಶಾ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ.ಯಾವತ್ಮಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಪೋಲಿಯೋ ಲಸಿಕಾ ಅಭಿಯಾನದ ವೇಳೆ, ಈ ಘಟನೆ ಸಂಭವಿಸಿದೆ.

ಡ್ರಾಪ್ಸ್ ಪಡೆದ ಮಕ್ಕಳನ್ನು ಪಾಲಕರು ಮನೆಗೆ ಕರೆದುಕೊಂಡು ಹೋದ ತಕ್ಷಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆತಂಕಗೊಂಡ ಪಾಲಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗಲೇ ವಿಷಯ ಬೆಳಕಿಗೆ ಬಂದಿದೆ.

Edited By : Nirmala Aralikatti
PublicNext

PublicNext

02/02/2021 11:56 am

Cinque Terre

58.59 K

Cinque Terre

7