ಆಧುನಿಕ ಜಾಯಮಾನದಲ್ಲಿ ಅದೆಷ್ಟೋ ಜನಕ್ಕೆ ಸಗಣಿ ಎಂದ್ರೇನೆ ಗೋತ್ತಿಲ್ಲ. ಇನ್ನೂ ಈ ಸಗಣಿಯಿಂದಾಗುವ ಉಪಯೋಗಗಳ ಬಗ್ಗೆಯಂತೂ ಮೊದಲೇ ತಿಳಿದಿಲ್ಲ.
ಸದ್ಯ ಸರಣಿಯಿಂದ ಚಿಪ್ ತಯಾರಿಸಲು ಮುಂದಾದ ಕೇಂದ್ರ ಮನುಕುಲಕ್ಕೆ ಮಹತ್ವದ ಕೊಡುಗೆ ನೀಡಲು ಮುಂದಾಗಿದೆ.
ಇದೇ ಅಕ್ಟೋಬರ್ 12 ರಂದು ರಾಷ್ಟ್ರೀಯ ಕಾಮಧೇನು ಆಯೋಗವು ಹೊಸ ಚಿಪ್ ಒಂದನ್ನು ಬಿಡುಗಡೆಗೊಳಿಸಿದೆ.
ಗೋವಿನ ಸಗಣಿಯಿಂದ ತಯಾರಾಗಿರುವ ಈ ಚಿಪ್ ಮೊಬೈಲ್ ಫೋನ್ ಬಳಕೆಯಿಂದಾಗುವಂತಹ ಹಾನಿಕಾರಕ ವಿಕಿರಣಗಳನ್ನು ತಡೆಗಟ್ಟುತ್ತದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷರಾದ ವಲ್ಲಭ್ ಭಾಯಿ ಕಥ್ರಿಯಾ ಹೇಳಿದ್ದಾರೆ.
ವರದಿಗಳ ಪ್ರಕಾರ ರಾಜ್ಕೋಟ್ ಮೂಲದ ಶ್ರೀಜೀ ಗೋಶಾಲೆ ಈ ಚಿಪ್ ತಯಾರಿಸುತ್ತಿದ್ದು ಅದಕ್ಕೆ ಗೋಸತ್ವ ಕವಚ ಎಂದು ಹೆಸರಿಡಲಾಗಿದೆ.
2019ರಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ ದೇಸಿ ಹಸುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರಾರಂಭಿಸಲಾಗಿದೆ.
ಸಧ್ಯ ದೇಶದಾದ್ಯಂತ ಸುಮಾರು 500ಕ್ಕೂ ಹೆಚ್ಚು ಗೋಶಾಲೆಗಳು ಈ ಚಿಪ್ ತಯಾರಿಸುತ್ತಿದ್ದು, ಒಂದು ಚಿಪ್ ಗೆ ₹50 ರೂಪಾಯಿ ದರ ನಿಗದಿಪಡಿಸಲಾಗಿದೆ.
ಈ ಚಿಪ್ ಗಳನ್ನು ಅಮೆರಿಕಾಗೆ ರಫ್ತು ಮಾಡುತ್ತಿದೆ, ಅಲ್ಲಿ ಈ ಚಿಪ್ ಗೆ $10 ಡಾಲರ್ ದರ ನಿಗದಿಪಡಿಸಲಾಗಿದೆ ಎಂದು ಕಾಥ್ರಿಯಾ ಹೇಳಿದರು.
ಗೋವು ಮತ್ತು ಗೋ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದು ನಮ್ಮ ಉದ್ದೇಶವಾಗಿದ್ದು ಈ ಪೈಕಿ ಸಗಣಿಯಿಂದ ತಯಾರಿಸಲ್ಪಟ್ಟ ಚಿಪ್ ಮೊಬೈಲ್ ರೇಡಿಯೇಷನ್ ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ಇನ್ನು ದೀಪಾವಳಿ ಸಂದರ್ಭದಲ್ಲಿ ಚೀನಿ ನಿರ್ಮಿತ ಹಣತೆಗಳ ಬದಲಾಗಿ ಸೆಗಣಿಯಿಂದ ಮಾಡಿರುವ ಹಣತೆಗಳನ್ನು ಉಪಯೋಗಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾಗೆ ಕೈಜೋಡಿಸಿ ಎಂದು ವಲ್ಲಭ್ ಭಾಯಿ ಕಥ್ರಿಯಾ ಕರೆ ನೀಡಿದ್ದಾರೆ.
PublicNext
15/10/2020 08:03 am