ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

DOLO-650 ಮಾತ್ರೆಯನ್ನ ರೋಗಿಗಳಿಗೆ ಶಿಫಾರಸು ಮಾಡಲು ವೈದ್ಯರೊಂದಿಗೆ 1,000 ಕೋಟಿ ರೂ. ಡೀಲ್!- ಕೇಂದ್ರದ ವರದಿ ಕೇಳಿದ 'ಸುಪ್ರೀಂ'

ನವದೆಹಲಿ: ಕೊರೊನಾ‌ ರ್ಸಂದರ್ಭದಲ್ಲಿ ಭಾರಿ ಲಾಭ ಗಳಿಸಿದ್ದ ಡೊಲೊ ಕಂಪನಿಯ ಬಿಗ್ ಮಾಫಿಯಾ ಬಯಲಾಗಿದೆ.

ಹೌದು. ಡೊಲೊ-650 ಟ್ಯಾಬ್ಲೆಟ್ ತಯಾರಕರು ಟ್ಯಾಬ್ಲೆಟ್ ಅನ್ನು ಶಿಫಾರಸು ಮಾಡಲು ವೈದ್ಯರಿಗೆ 1,000 ಕೋಟಿ ರೂ. ಮೌಲ್ಯದ 50 ಉಚಿತ ಕೊಡುಗೆ ವಿತರಿಸಿದ್ದಾರೆ ಎಂದು ನೇರ ತೆರಿಗೆ ಮಂಡಳಿಯು ದೂರು ನೀಡಿರುವುದಾಗಿ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಒಕ್ಕೂಟವು ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ರೋಗಿಗಳಿಗೆ ಜ್ವರ ನಿವಾರಕ ಔಷಧವಾಗಿ ಈ ಟ್ಯಾಬ್ಲೆಟ್  ಶಿಫಾರಸು ಮಾಡಲು DOLO ತಯಾರಕರು 1,000 ಕೋಟಿ ಮೌಲ್ಯದ ಉಚಿತ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

ವನ್ಯಾಯಮೂರ್ತಿ ಎಎಸ್ ಬೋಪಣ್ಣ ಜತೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಕೋವಿಡ್ ಸಮಯದಲ್ಲಿ ನನಗೂ ಡೊಲೊ ಬಳಸುವಂತೆ ನಿರ್ದೇಶಿಸಲಾಗಿತ್ತು. ಇದು ತುಂಬಾ ಗಂಭೀರ ವಿಷಯ ಎಂದಿದ್ದಾರೆ. ಇದೇನೂ ಹಿತಕರವಾದ ಸಂಗತಿಯಲ್ಲ. ನನಗೆ ಕೋವಿಡ್ ಬಂದಾಗ ಇದನ್ನೇ ನೀಡಲಾಗಿತ್ತು. ಇದು ಗಂಭೀರ ಪ್ರಕರಣ ಮತ್ತು ಸಂಗತಿ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರಲ್ಲಿ 10 ದಿನಗಳೊಳಗ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಹೇಳಿದೆ.

Edited By : Vijay Kumar
PublicNext

PublicNext

19/08/2022 07:06 am

Cinque Terre

78.02 K

Cinque Terre

5

ಸಂಬಂಧಿತ ಸುದ್ದಿ