ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಾರದ್ದೋ ಲಾಭಕ್ಕಾಗಿ ನಿರ್ಣಯ ಬದಲಿಸಲು ಸಾಧ್ಯವಿಲ್ಲ : ಆರ್ ಅಶೋಕ

ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಸೋಂಕಿನ ಪಾಸಿಟಿವಿಟಿ ರೇಟ್ ಹೆಚ್ಚಿದೆ ಆದ್ರೆ ಸಾವಿನ ಪ್ರಯಾಣ ಕಡಿಮೆ ಇದೆ ಹಾಗಾಗಿ ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಂಜೆ ಸಿಎಂ ಸಮ್ಮುಖದಲ್ಲಿ ಕೋವಿಡ್ ಸಭೆ ನಡೆಯಲಿದೆ ಅಲ್ಲಿ ವೈದ್ಯಕೀಯ ಸೌಲಭ್ಯ ಕುರಿತಂತೆ ಚರ್ಚೆಯಾಗಲಿದೆ. ಬೇರೆ ರಾಜ್ಯಗಳಲ್ಲಿಸೋಂಕು ತಗ್ಗುತ್ತಿದೆ. ಸೋಂಕು ಕಡಿಮೆಯಾದರೆ ರಿಲ್ಯಾಕ್ಸ್ ಮಾಡಬಹುದು, ಆದರೆ ಲಾಕ್ ಡೌನ್ ವಿಚಾರ ನಮ್ಮಮುಂದಿಲ್ಲ. ಯಾರಿಗೂ ಸ್ವಲ್ಪ ಲಾಭವಾಗುತ್ತೆ ಅಂತ ರಿಲ್ಯಾಕ್ಸ್ ಇಲ್ಲ ಲಕ್ಷಾಂತರ ಜನರನ್ನ ಕಷ್ಟಕ್ಕೆ ದೂಡುವುದಿಲ್ಲ. ವೀಕೆಂಡ್ ಕರ್ಪ್ಯೂ ಮಾಡುವ ಮನಸ್ಥಿತಿ ನಮಗಿಲ್ಲ. ಹೊಟೇಲ್ ಮಾಲಿಕರಾಗಲಿ,ಬೇರೆಯಾಗಲಿ ನಾವು ಒತ್ತಡಕ್ಕೆ ಮಣಿಯಲು ಸಾಧ್ಯವಿಲ್ಲ ತಜ್ಙರ ಸಲಹೆಯಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮೇಕೆದಾಟು ಯೋಜನೆ ಜಾರಿ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದ ಅವರು, ಕಾಂಗ್ರೆಸ್ ನವರದ್ದು ಬೆಟ್ಟ ಅಗೆದು ಇಲಿ ಹಿಡಿಯುವ ಮನಸ್ಥಿತಿ ಎಂದರು.

Edited By : Manjunath H D
PublicNext

PublicNext

17/01/2022 05:35 pm

Cinque Terre

109.75 K

Cinque Terre

3

ಸಂಬಂಧಿತ ಸುದ್ದಿ