ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕನ್ ರೋಸ್ಟ್ ರೆಸಿಪಿ

ಬೇಕಾಗುವ ಪದಾರ್ಥಗಳು

• 750 ಗ್ರಾಂ ಕೋಳಿ

ಮುಖ್ಯ ಅಡುಗೆಗೆ

• 4 - ಕತ್ತರಿಸಿದ ಈರುಳ್ಳಿ

• 1 ಚಮಚ ಅಗತ್ಯಕ್ಕೆ ತಕ್ಕಷ್ಟು ಮೆಣಸಿನ ಬೀಜ/ಚಿಲ್ಲಿ ಫ್ಲೇಕ್ಸ್

• 1 ಕಪ್ ಅಗತ್ಯಕ್ಕೆ ತಕ್ಕಷ್ಟು ಕರಿಬೇವು

• 1 ಚಮಚ ಅಗತ್ಯಕ್ಕೆ ತಕ್ಕಷ್ಟು ವಿನೆೆಗರ್

• 3 ಚಮಚ ಕತ್ತರಿಸಿದ ಶುಂಠಿ

• 3 ಚಮಚ ಕತ್ತರಿಸಿದ ಬೆಳ್ಳುಳ್ಳಿ

ಒಗ್ಗರಣೆ

• 5 ಚಮಚ ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ

ಮಾಡುವ ವಿಧಾನ

- ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಬಿಸಿಮಾಡಿ.- ಎಣ್ಣೆ ಬಿಸಿಯಾದ ಬಳಿಕ ಕರಿಬೇವಿನ ಎಲೆ, ಹೆಚ್ಚಿಕೊಂಡ ಈರುಳ್ಳಿ ಸೇರಿಸಿ, 2 ನಿಮಿಷ ಹುರಿಯಿರಿ.- ಬಳಿಕ ವಿನೆಗರ್, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಹುರಿಯಿರಿ.

- ಚಿಕನ್, ಕೆಂಪು ಮೆಣಸಿನ ಫ್ಲೇಕ್ಸ್ ಮತ್ತು ಸ್ವಲ್ಪ ನೀರನ್ನು ಸೇರಿಸಿ 8-10 ನಿಮಿಷಗಳ ಕಾಲ ಬೇಯಿಸಿ.- ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ. - ನಂತರ ಚಿಕನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

ಚಿಕನ್ ಉತ್ತಮವಾಗಿ ಬೆಂದು ಮೃದುವಾದ ಸ್ಥಿರತೆಯನ್ನು ಪಡೆದುಕೊಳ್ಳಲು ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.

ರುಚಿಕರವಾದ ಈ ಖಾದ್ಯವನ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ ರೊಟ್ಟಿಯೊಂದಿಗೆ, ಬ್ರೆಡ್ನೊಂದಿಗೆ ಅಥವಾ ಹಾಗೆಯೇ ಬಿಸಿ ಬಿಸಿಯಾಗಿ ಸವಿಯಬಹುದು.

Edited By : Nirmala Aralikatti
PublicNext

PublicNext

04/11/2020 04:03 pm

Cinque Terre

38.61 K

Cinque Terre

0