ವಾಷಿಂಗ್ಟನ್: ಹೋಪ್ ಹಿಕ್ಸ್ ಅವರಿಗೆ ಸೋಂಕು ಬಂದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಟ್ರಂಪ್, "ನನಗೆ ಹಾಗೂ ಮೆಲಾನಿಯಾ ಗೆ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ನಾವು ಕೂಡಲೇ ಕ್ವಾರಂಟೀನ್ಗೆ ಒಳಗಾಗಿ ಚಿಕಿತ್ಸೆ ಪ್ರಕ್ರಿಯೆಗಳೂ ಆರಂಭವಾಗುತ್ತಿವೆ, ಒಟ್ಟಿಗೆ ಚಿಕಿತ್ಸೆ ಪಡೆಯುತ್ತಿದ್ದೇವೆ, ನಾವಿಬ್ಬರೂ ಒಟ್ಟಾಗಿ ಇದರಿಂದ ಹೊರಬರಲಿದ್ದೇವೆ" ಎಂದು ಟ್ರಂಪ್ ಟ್ವೀಟ್ ಮೂಲಕ ಖಚಿತಪಡಿಸಿದ್ದರು.
ಆದರೆ ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊರೊನಾ ಚಿಕಿತ್ಸೆಗಾಗಿ ವಾಲ್ಟರ್ ರೀಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈಟ್ ಹೌಸ್ ನಿಂದ ಹೆಲಿಕಾಪ್ಟರ್ ಮೂಲಕ ಡೊನಾಲ್ಡ್ ಟ್ರಂಪ್ ವಾಲ್ಟರ್ ರೀಡ್ ಆಸ್ಪತ್ರೆಗೆ ತೆರಳಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಸ್ಪತ್ರೆಗೆ ತೆರಳುವ ಮುನ್ನ ಈ ಕುರಿತು ವಿಡಿಯೋದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ತಾವು ಆಸ್ಪತ್ರೆಗೆ ದಾಖಲಾಗುತ್ತಿರುವುದಾಗಿ ತಿಳಿಸಿದ್ದಾರೆ, ಅಲ್ಲದೆ ಕೊರೊನಾ ದೃಢಪಟ್ಟಿರುವ ಪತ್ನಿ ಮೆಲಾನಿಯಾ ಫಸ್ಟ್ ಲೇಡಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
PublicNext
03/10/2020 08:09 am