ವಾಷಿಂಗ್ಟನ್: ಇತ್ತಿಚ್ಚೆಗೆ ಡೆಡ್ಲಿ ಸೋಂಕು ಕೊರೊನಾ ವೈರಸ್ ಅಟ್ಯಾಕ್ ಆದ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸದ್ಯ ಸೋಂಕಿನಿಂದ ಚೇತರಿಸಿಕೊಂಡ ಟ್ರಂಪ್ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಶ್ವೇತ ಭವನ ಪ್ರವೇಶಿಸಿದ ಕೂಡಲೇ ಮಾಸ್ಕ್ ತೆಗೆದ ಅವರು, ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಘೋಷಿಸಿದರು.
ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಟ್ರಂಪ್, 'ಅಮೆರಿಕನ್ನರು ಭಯಪಡಬೇಕಿಲ್ಲ,' ಎಂದು ಹೇಳಿದರು. ಆದರೆ, ಈ ವರೆಗೆ ಅಮೆರಿಕದಲ್ಲಿ 2,10,000 ಮಂದಿ ಕೊರೊನಾ ವೈರಸ್ ಗೆ ಪ್ರಾಣ ಕಳೆದುಕೊಂಡಿದ್ದಾರೆ.
ಕೋವಿಡ್ ಗೆ ಯಾರೂ ಭಯಪಡಬೇಡಿ ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.
PublicNext
06/10/2020 09:44 am