ಸಿರಿಯಾಲ್: ವಿಶ್ವವೇ ಕೋವಿಡ್ ನಿಂದ ತತ್ತರಿಸಿದೆ. ಇದಕ್ಕೆ ಕಾರಣ ಏನೂ ಅನ್ನೋದು ಇನ್ನೂ ಪತ್ತೆ ಆಗಿಲ್ಲ. ಆದರೆ, ಉತ್ತರ ಕೋರಿಯಾ ಕೋವಿಡ್ ಸೋಂಕಿನ ಕಾರಣ ಪತ್ತೆ ಹಚ್ಚಿ ಬಿಟ್ಟಿದೆ.
ಚೀನಾದಲ್ಲಿಯೇ ಕೋವಿಡ್ ಸೋಂಕು ಮೊದಲು ಕಾಣಿಸಿಕೊಂಡಿದೆ. ಇಲ್ಲಿಯ ವುಹಾನ್ ಪ್ರಾಣಿ ಮಾರುಕಟ್ಟೆಯಲ್ಲಿಯೇ ಸೋಂಕು ಸ್ಪೋಟಗೊಂಡಿದೆ. ಆದರೆ, ಉತ್ತರ ಕೋರಿಯಾ ಈಗ ಕೋವಿಡ್ ಸೋಂಕಿನ ಅಸಲಿ ಕಾರಣವನ್ನ ಪತ್ತೆ ಹಚ್ಚಿ ಬಿಟ್ಟಿದೆ.
ಹೌದು. ಅಸಾಮಾನ್ಯ ವಸ್ತುಗಳನ್ನ ಟಚ್ ಮಾಡೋದ್ರಿಂದಲೇ ಕೋವಿಡ್ ಹರಡಿದೆಯಂತೆ. ಹೀಗನ್ನೋದನ್ನ ಉತ್ತರ ಕೋರಿಯಾ ಕಂಡು ಹಿಡಿದಿ ಬಿಟ್ಟಿದೆ. ದಕ್ಷಿಣ ಕೋರಿಯಾದ ಜನ ಇಲ್ಲಿಯ ಅದ್ಯಾವುದೋ ಅಸಾಮಾನ್ಯ ವಸ್ತುಗಳನ್ನ ಮುಟ್ಟಿದ್ದಾರೆ. ಅದಕ್ಕೇನೆ ಕೋವಿಡ್ ದೇಶದಲ್ಲಿ ಸಡನ್ ಆಗಿಯೇ ಸ್ಪೋಟಗೊಂಡಿದೆ ಅಂತಲೇ ಉತ್ತರ ಕೋರಿಯಾ ಹೇಳಿಕೊಂಡಿದೆ.
18 ವರ್ಷದ ಸೈನಿಕ ಮತ್ತು ಐದು ವರ್ಷದ ಹುಡುಗನಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರು ಅಸಾಮಾನ್ಯ ವಸ್ತುಗಳನ್ನ ಮುಟ್ಟಿದ್ದಾರೆ. ಈ ಕಾರಣಕ್ಕೇನೆ ಇವರಿಗೆ ಕೋವಿಡ್ ಬಂದಿದೆ ಅಂತಲೂ ಉತ್ತರ ಕೋರಿಯಾದ ಸರ್ಕಾರಿ ಸ್ವಾಮ್ಯದ ಕೆಸಿಎನ್‌ಎ ಈಗ ವರದಿ ಮಾಡಿದೆ.
PublicNext
02/07/2022 01:52 pm