ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂವರು ಸೋಂಕಿತರಲ್ಲಿ ಒಬ್ಬರು ಸಾವು.! ಹೊಸ ಕೊರೊನಾ ರೂಪಾಂತರದ ಬಗ್ಗೆ ವುಹಾನ್ ವಿಜ್ಞಾನಿಗಳ ಎಚ್ಚರಿಕೆ

ಬೀಜಿಂಗ್: ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಈ ಮಧ್ಯೆ ಆಘಾತಕಾರಿ ಸಂಗತಿಯೊಂದನ್ನು ಚೀನಾದ ವುಹಾನ್‌ನ ವಿಜ್ಞಾನಿಗಳು ತಿಳಿಸಿದ್ದಾರೆ.

ಹೌದು. 2019ರಲ್ಲಿ ಮೊದಲ ಬಾರಿಗೆ ಕೋವಿಡ್-19 ವೈರಸ್ ಪತ್ತೆಯಾದ ಚೀನಾದ ವುಹಾನ್‌ನ ವಿಜ್ಞಾನಿಗಳು, ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ರೂಪಾಂತರ 'ನಿಯೋಕೋವ್' ಬಗ್ಗೆ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, 'ಇದು ಹೆಚ್ಚಿನ ಸಾವು ಮತ್ತು ಪ್ರಸರಣ ದರವನ್ನು ಹೊಂದಿದೆ' ಎಂದು ರಷ್ಯಾ ಮಾಧ್ಯಮಗಳು ಕೂಡ ವರದಿ ಮಾಡಿವೆ.

ಆದಾಗ್ಯೂ ವರದಿಯ ಪ್ರಕಾರ, ನಿಯೋಕೋವ್ ವೈರಸ್ ಹೊಸದೆನಲ್ಲ. ಮೇರ್ಸ್-ಕೋವ್ (MERS-CoV) ವೈರಸ್‌ನೊಂದಿಗೆ ಸಂಯೋಜಿತವಾಗಿದೆ. ಇದು 2012 ಮತ್ತು 2015ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಏಕಾಏಕಿ ಪತ್ತೆಯಾಗಿತ್ತು.

ನಿಯೋಕೋವ್ ದಕ್ಷಿಣ ಆಫ್ರಿಕಾದಲ್ಲಿ ಬಾವಲಿ (ಬ್ಯಾಟ್)ಗಳಲ್ಲಿ ಪತ್ತೆಯಾಗಿದ್ದು, ಇವುಗಳಲ್ಲಿ ಮಾತ್ರವೇ ಹರಡುತ್ತದೆ ಎನ್ನುವುದು ಹಿಂದಿನ ಸಂಶೋದನೆಯಲ್ಲಿ ತಿಳಿದುಬಂದಿದೆ. ಬಯೋ ರಕ್ಸಿವ್ (bioRxiv) ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, ನಿಯೋಕೋವ್ ಮತ್ತು ಅದರ ರೂಪಾಂತರ PDF-2180-CoV ಮಾನವರಿಗೆ ಸೋಂಕು ಹರಡುತ್ತದೆ ಎಂದು ಕಂಡುಹಿಡಿದಿದೆ.

ಚೀನೀ ಸಂಶೋಧಕರ ಪ್ರಕಾರ, ನಿಯೋಕೋವ್ ಹಾಗೂ ಮೇರ್ಸ್-ಹೈ ಕೋವ್ ಮರಣ ಪ್ರಮಾಣವು ಹೆಚ್ಚಾಗಿರುತ್ತದೆ (ಪ್ರತಿ ಮೂರು ಸೋಂಕಿತ ವ್ಯಕ್ತಿಗಳಲ್ಲಿ ಒಬ್ಬರು ಸಾಯುತ್ತಾರೆ).

Edited By : Vijay Kumar
PublicNext

PublicNext

28/01/2022 01:57 pm

Cinque Terre

82.78 K

Cinque Terre

4

ಸಂಬಂಧಿತ ಸುದ್ದಿ