ಬೀಜಿಂಗ್: ಚೀನಾದಲ್ಲಿ ಮತ್ತೆ ಮಹಾಮಾರಿ ಕೊರೊನಾ ಭೀತಿ ಹೆಚ್ಚಾಗಿದೆ. ಚೀನಿಯರು ಮತ್ತೆ ಆತಂಕದಲ್ಲಿದ್ದಾರೆ. ಡೇಲಿಯನ್ ನಗರದ ವಿಶ್ವವಿದ್ಯಾಲಯವೊಂದರಲ್ಲಿ ಕೊರೊನಾ ವೈರಸ್ ಇದ್ದಕ್ಕಿಂದ್ದಂತೆ ಉಲ್ಬಣವಾಗಿದೆ. ಹೀಗಾಗಿ 1500 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಹೊಟೆಲ್‌ಗಳಲ್ಲೇ ಉಳಿಯುವಂತೆ ಚೀನಾ ಸರ್ಕಾರ ಆದೇಶ ನೀಡಿದೆ.
ವಿಶ್ವವಿದ್ಯಾಲಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸಲಾಗುತ್ತಿದೆ. ಊಟ, ಉಪಹಾರವನ್ನು ಅವರ ಕೊಠಡಿಗಳಿಗೆ ತಲುಪಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸುವುದಕ್ಕೆ ಚೀನಾ ಸರ್ಕಾರ ಏಕಾಏಕಿ ಲಾಕ್‌ಡೌನ್ ಘೋಷಿಸಿದ್ದು, ಇದು ಜನರ ಜೀವನ ಮತ್ತು ಜೀವನೋಪಾಯಕ್ಕೆ ಸಾಕಷ್ಟು ಅಡ್ಡಿ ಉಂಟು ಮಾಡಿದೆ.
PublicNext
15/11/2021 05:03 pm