ಲಂಡನ್ : ಡೆಡ್ಲಿ ಸೋಂಕಿನಿಂದ ಸೋತ ಜನರಿಗೆ ಈಗ ಮತ್ತೊಂದು ಆತಂಕ ಶುರುವಾಗಿದೆ.
ಬ್ರಿಟನ್ ನಲ್ಲಿ ಕಾಣಿಸಿಕೊಂಡ ಹೊಸ ಮಾದರಿ ವೈರಸ್ ಸದ್ಯ ಇನ್ನೂ 7 ದೇಶಗಳಲ್ಲಿ ಕಾಣಿಸಿಕೊಂಡಿರುವ ಆತಂಕಕ್ಕೆ ಕಾರಣವಾಗಿದೆ.
ಈ ವೈರಸ್ , ಈ ಹಿಂದಿನ ಮಾದರಿಗಳಿಗಿಂತ ಶೇ.70ರಷ್ಟುವೇಗವಾಗಿ ಹಬ್ಬುವ ಸಾಮರ್ಥ್ಯ ಇರುವ ಕಾರಣ ಹಲವಾರು ದೇಶಗಳಲ್ಲಿ ಎರಡನೇ ಅಲೆಯ ಭೀತಿ ಎದುರಾಗಿದೆ.
ಇನ್ನೇನು ಡೆಡ್ಲಿ ಸೋಂಕಿಗೆ ಮದ್ದು ಸಿಕ್ಕಿತ್ತೇನುವಷ್ಟರಲ್ಲಿ ಈ ಆತಂಕ ಇಡೀ ಜಗತ್ತನ್ನು ಮತ್ತೊಮ್ಮೆ ತಲ್ಲಣಗೊಳಿಸಿದೆ.
ಇನ್ನೂ 7 ದೇಶದಲ್ಲಿ ಪತ್ತೆ:
ತನ್ನ ದೇಶದಲ್ಲಿ ಕೊರೊನಾದ ಹೊಸ ಮಾದರಿ ಪತ್ತೆಯಾಗಿದೆ ಎಂದು ಘೋಷಿಸಿ ಬ್ರಿಟನ್ ಸರ್ಕಾರ ದೇಶದಲ್ಲಿ ಹಲವು ಹೊಸ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ, ಇಟಲಿ, ಡೆನ್ಮಾರ್ಕ್, ನೆದರ್ಲೆಂಡ್, ಆಸ್ಪ್ರೇಲಿಯಾ, ಬೆಲ್ಜಿಯಂ, ಟರ್ಕಿ ದೇಶಗಳು ಕೂಡಾ ತಮ್ಮ ದೇಶಗಳಲ್ಲಿ ಇಂಥ ಹೊಸ ಮಾದರಿ ಪತ್ತೆಯಾಗಿರುವ ಮಾಹಿತಿ ಬಹಿರಂಗಪಡಿಸಿವೆ.
ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಹೊಸ ಮಾದರಿಯ ವೈರಸ್ ನಿಂದಾಗಿ 2ನೇ ಅಲೆ ಕಾಣಿಸಿಕೊಂಡಿದೆ.
ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆ ಸೇರುವವರು ಹಾಗೂ ಮರಣ ಹೊಂದುವವರ ಸಂಖ್ಯೆಯೂ ಹೆಚ್ಚಳವಾಗಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಾರ್, ಬೀಚ್ ಗಳನ್ನು ಬಂದ್ ಮಾಡಲಾಗಿದೆ.
ಜೊತೆಗೆ ಬ್ರಿಟನ್ ನಲ್ಲಿ ಕಂಡು ಬಂದ ವೈರಸ್ ಗಿಂತ ಆಫ್ರಿಕಾದಲ್ಲಿ ಪತ್ತೆಯಾಗಿರುವ ವೈರಸ್ ವಿಭಿನ್ನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಹೊಸ ಸ್ವರೂಪದ ವೈರಸ್ ಶೇ.70ರಷ್ಟುಅಧಿಕ ವೇಗದಲ್ಲಿ ಹಬ್ಬುತ್ತದೆ. ಒಂದೇ ವಾರದಲ್ಲಿ ಬ್ರಿಟನ್ ನಲ್ಲಿ ನಿತ್ಯದ ಸೋಂಕು, ಸಾವಿನ ಪ್ರಮಾಣ ದ್ವಿಗುಣಗೊಂಡಿದೆ.
PublicNext
22/12/2020 08:21 am