ಲಂಡನ್ : ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾದಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕೋವಿಡ್ ಲಸಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಬ್ರಿಟನ್ ನಲ್ಲಿ ಮುಂದಿನ ವಾರದಿಂದ ಲಸಿಕೆ ಬಿಡುಗಡೆ ಆಗಲಿದೆ.
ಫಿಜರ್ ಮತ್ತು ಬಯೋನೆಟಿಕ್ ಸಂಸ್ಥೆಗಳು ತಯಾರಿಸಿರುವ ಲಸಿಕೆ ಫಲಿತಾಂಶ ಪ್ರಕಟಿಸಿದ್ದು, ಇದು ಜನರಿಗೆ ವಿತರಿಸಲು ಸುರಕ್ಷಿತವಾಗಿದೆ ಎಂದು ವಿತರಣೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ.
ಇದು ಇಡೀ ವಿಶ್ವದಲ್ಲೇ ಕೋವಿಡ್ ಗೆ ಲಸಿಕೆ ಬಿಡುಗಡೆ ಮಾಡಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ.
ಬ್ರಿಟನ್ ನ ಔಷಧ ಮತ್ತು ಆರೋಗ್ಯ ವರ್ಧಕ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್ ಆರ್ ಎ) ಲಸಿಕೆ ಬಗ್ಗೆ ನಮಗೆ ವಿಶ್ವಾಸವಿದೆ.
ಈಗಾಗಲೇ ರೋಗಿಗಳ ಮೇಲೆ ಹಾಗೂ ವೈಜ್ಞಾನಿಕ ಪ್ರಯೋಗದಲ್ಲಿ ಶೇ.95ರಷ್ಟು ಪರಿಣಾಮ ಬೀರಿದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದೆ.
PublicNext
02/12/2020 04:20 pm