ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ 3ನೇ ಅಲೆಗೆ ಹೆದರಿ ಆಂಧ್ರದಲ್ಲಿ ಮದುವೆಯಾದ 50 ಸಾವಿರ ಜೋಡಿ!

ವಿಜಯವಾಡ: ಕೊರೊನಾ ಕಾಲಘಟ್ಟ ಶುರುವಾದಾಗಿನಿಂದ ಜನ ಜೀವನ ಬದಲಾಗಿ ಹೋಗಿದೆ. ಅದರಲ್ಲೂ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬಿದ್ದಿವೆ. ಸದ್ಯ ಕೊರೊನಾ 3ನೇ ಅಲೆಯ ಭೀತಿ ಎಲ್ಲರನ್ನೂ ಕಾಡುತ್ತಿದೆ. ಯಾವಾಗ ಲಾಕ್ ಡೌನ್ ಆಗುತ್ತದೆ, ಯಾವಾಗ ಸಭೆ ಸಮಾರಂಭಗಳನ್ನು ಬ್ಯಾನ್ ಮಾಡಲಾಗುತ್ತದೆಯೋ ತಿಳಿದಿಲ್ಲ. ಇದೇ ಕಾರಣಕ್ಕೆ ಆಂಧ್ರಪ್ರದೇಶದಲ್ಲಿ 13 ದಿನದಲ್ಲಿ 50 ಸಾವಿರ ಜೋಡಿಗಳು ಮದುವೆಯಾಗಿವೆ.

3ನೇ ಅಲೆ ಬರುವ ಮುನ್ನವೇ ಮಕ್ಕಳ ಮದುವೆ ಮಾಡಲು ಆಂಧ್ರದಲ್ಲಿ ಸಾವಿರಾರು ಪೋಷಕರು ಆತುರರಾಗಿದ್ದಾರೆ. ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ದೇಶಕ್ಕೆ 3ನೇ ಬರಬಹುದು ಎಂದು ತಜ್ಞರು ಹೇಳೀರುವ ಕಾರಣ , ಲಗುಬಗೆಯಿಂದ ಮದುವೆಯಾಗುತ್ತಿವೆ ಜೋಡಿಗಳು.

Edited By : Nirmala Aralikatti
PublicNext

PublicNext

16/08/2021 03:27 pm

Cinque Terre

44.98 K

Cinque Terre

0