ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಎರಡು ತಿಂಗಳ ಕಂದಮ್ಮನಿಗೆ ವಿಶ್ವವೇ ಬೆಚ್ಚುವಂಥಾ ಸಮಸ್ಯೆ: ಸಂಜೀವಿನಿಗೆ ಬೇಕಿದೆ 16 ಕೋಟಿ...!

ಗದಗ: ಆ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ, ದಂಪತಿಗಳಿಬ್ಬರೂ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಚೊಚ್ಚಲ ಗಂಡು ಮಗುವನ್ನು ಇಡೀ ಕುಟುಂಬ ಸಂಭ್ರಮಿಸಿ ಖುಷಿ ಪಟ್ಟಿತ್ತು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಅಪರೂಪದ ಖಾಯಿಲೆಗೆ ತುತ್ತಾದ ಮಗು ಜೀವನ್ಮರಣ ಹೋರಾಟ ನಡೆಸಿ ಐದೇ ತಿಂಗಳಿಗೆ ಸಾವನ್ನಪ್ಪಿತ್ತು. ಇಡೀ ಕುಟುಂಬ ಕಣ್ಣಿರಲ್ಲಿ ಮಮ್ಮಲ ಮರುಗಿ ಹೋಗಿತ್ತು. ಇನ್ನೇನು! ಆಗಿದ್ದೆಲ್ಲವೂ ಕೆಟ್ಟ ಕನಸು, ಮರೆತುಬಿಡೋಣ ಅಂತ ದಂಪತಿ ಮತ್ತೊಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ದೇವರ ವಿಧಿಯಾಟವೇ ಬೇರೆ! ಎರಡನೇ ಸಲ ಜನಿಸಿರೋ ಎರೆಡು ತಿಂಗಳ ಮುದ್ದಾದ ಗಂಡು ಮಗುವೂ ಸಹ ಇದೀಗ ಅಂತಹದೇ ಖಾಯಿಲೆಗೆ ತುತ್ತಾಗಿ ಮನುಕುಲವೇ ಕಣ್ಣೀರು ಸುರಿಸುವಂತೆ ಮಾಡಿದೆ.

ಪುಟ್ಟ ಕಂದ....ಪಿಳಿ ಪಿಳಿ ಕಣ್ಣು ಬಿಡುತ್ತಾ ಪಿಸು ಪಿಸು ನಗುತ್ತಾ ತುಂಟಾಟ ನೋಡ್ತಾ ಹೆತ್ತವರು ತಮ್ಮ ಹಳೆಯ ನೋವು ಮರೆತು ಖುಷಿ ಖುಷಿ ಆಗಿ ಇರಬೇಕಿತ್ತು. ಜೀವನದುದ್ದಕ್ಕೂ ಹರುಷವಾಗಿ ಇರಬೇಕಿತ್ತು. ಆದರೆ ಈ ದಂಪತಿಗೆ ಮಾತ್ರ ಆ ಖುಷಿ ಅನುಭವಿಸುವ ಅವಕಾಶವೇ ಕೊಟ್ಟಿಲ್ಲ. ನೋಡಿ ಮಗು ಎಷ್ಟು ಮುದ್ದಾಗಿದೆ. ನೋಡಿದ್ರೆ ಎತ್ತಿ ಆಡಿಸಬೇಕು ಅನ್ಸುತ್ತೆ.ಆದರೆ ಹೆತ್ತವರಿಗೆ ಖುಷಿಯೇ ಇಲ್ಲ. ಮಗುವಿನ ಮುಖ ನೋಡಿ ನಿತ್ಯವೂ ಕಣ್ಣೀರಿಡುತ್ತಿದ್ದಾರೆ. ಯಾಕಂದ್ರೆ ಈ ಮಗು ನೋಡೋಕೆ ಚೆನ್ನಾಗಿಯೇ ಕಾಣ್ತಿರಬಹುದು. ಆದರೆ ಇಡೀ ವೈದ್ಯ ಲೋಕ, ಇಡೀ ಜಗತ್ತೇ ದಂಗಾಗುವಂಥ ಸಮಸ್ಯೆಗೆ ತುತ್ತಾಗಿದೆ. ಈಗ ಮಗು ಬದುಕುಳಿಯಬೇಕು ಅಂದರೆ ಒಂದಲ್ಲ, ಎರಡಲ್ಲ, ಬರೊಬ್ಬರಿ 16 ಕೋಟಿ ರೂ. ಬೇಕು. ಹೌದು..ಕಂದನಿಗೆ ಸ್ಪೈನಲ್ ಮಸ್‌ಕ್ಯೂಲರ್ ಆಟ್ರೋಪಿ ಕುತ್ತು ಎದುರಾಗಿದ್ದು, 16 ಕೋಟಿ ಸಂಜೀವಿನಿಗಾಗಿ ಜೀವನ್ಮರಣ ಹೋರಾಟ ನಡೆಸಿದೆ.

ಅಷ್ಟಕ್ಕೂ ಈ ಎರೆಡು ತಿಂಗಳ ಕಂದ ಧನುಷ್, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ನಿವಾಸಿಯಾಗಿರೋ ಶರಣಪ್ಪ ಹಾಗೂ ಭೀಮಾಕ್ಷಿ ದಂಪತಿ ಎರಡನೇ ಪುತ್ರ. ಕೃಷಿಯನ್ನೇ ನಂಬಿ ಬದುಕ್ತಿರೋ ಇವರ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಇಂಥದ್ರ ಮಧ್ಯೆ ಮಗುವಿಗೆ ಜೀವ ಹಿಂಡೋ ಸಮಸ್ಯೆ ಕಾಣಿಸಿಕೊಂಡಿದೆ. ಅದು ಸಹ ಮೊದಲೇನಲ್ಲ. ಈಗಾಗಲೇ ಮೊದಲ ಮಗು ಸಹ ಇದೇ ಖಾಯಿಲೆಗೆ ತುತ್ತಾಗಿ ಐದೇ ತಿಂಗಳಿಗೆ ಸಾವನ್ನಪ್ಪಿದೆ. ಹೀಗಾಗಿ ಎರಡನೇ ಮಗುವಿನಂದಾರೂ ನಮ್ಮ ಮನೆಯ ದೀಪ ಬೆಳಗುತ್ತೆ ಅಂತ ದಂಪತಿಗಳು ಅದ್ಧೂರಿಯಾಗಿ ಸಂಭ್ರಮ ಮಾಡಿ ಧನುಷ್ ಅಂತ ನಾಮಕರಣ ಮಾಡಿದಾರೆ. ಆದ್ರೆ ದೇವರ ಆಟ. ಮಗುವಿಗೆ ಅಪರೂಪದಲ್ಲೇ ಅಪರೂಪದ ಖಾಯಿಲೆ ಕಾಣಿಸಿಕೊಂಡಿದೆ.ಸ್ಪೈನಲ್ ಮಸ್‌ಕ್ಯೂಲರ್ ಅಟ್ರೋಪಿ ಅಂದ್ರೆ, ಬೆನ್ನುಮೂಳೆಯ ಸ್ನಾಯು ಕ್ಷಿಣತೆ ಅಂತಾರೆ. ವೈದ್ಯಲೋಕದಲ್ಲಿ ಇದು ಅಪರೂಪದ ಸಮಸ್ಯೆ. ಈಗ ಧನುಷ್ ಉಳಿಯಬೇಕಾದ್ರೆ ಬರೊಬ್ಬರಿ 16 ಕೋಟಿ ಮೆಡಿಸನ್ ಬೇಕಾಗಿದೆ. ಅದು ಅಮೇರಿಕದಲ್ಲಿ ಸಿಗುವ ಔಷಧೀಯೇ ಬೇಕು. ಇಷ್ಟೊಂದು ದುಡ್ಡು ಎಲ್ಲಿಂದ ತರೋದು, ನನ್ನ ಮಗುವನ್ನು ಹೇಗಾದ್ರೂ ಮಾಡಿ ಉಳಿಸಿಕೊಡಿ ಅಂತ ಮಗುವಿನ ತಾಯಿ ಕಣ್ಣೀರಿಡ್ತಿದ್ದಾಳೆ.

Edited By : Manjunath H D
PublicNext

PublicNext

13/08/2021 06:05 pm

Cinque Terre

81.26 K

Cinque Terre

17

ಸಂಬಂಧಿತ ಸುದ್ದಿ