ಬೀಜಿಂಗ್: ಏನೋ ಮಾಡಲು ಹೋಗಿ ಏನು ಮಾಡಿದೆ ನೀನು? ಅಂತಾರಲ್ಲ. ಹಾಗಾಗಿದೆ ಈ ಗಾಯಕಿಯ ವ್ಯಥೆ. ಗಾವೋ ಲಿಯು ಎಂಬ ಈ ಚೀನಿ ಗಾಯಕಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ತನ್ನ ಮೂಗನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದ್ರೆ ಕೆಲ ದಿನಗಳ ನಂತರ ಮೂಗಿನ ತುದಿಯಲ್ಲಿ ಕಪ್ಪಗಿನ ಕಲೆ ಕಾಣಿಸಿಕೊಂಡು ನಂತರ ಕಲೆ ದೊಡ್ಡದಾಗಿದೆ.
ಇದಕ್ಕೆ ಕಾರಣ ಪ್ಲ್ಯಾಸ್ಟಿಕ್ ಸರ್ಜರಿ ಮಾಡುವಾಗ ವೈದ್ಯರು ಮಾಡಿದ ಯಡವಟ್ಟು. ದೋಷಪೂರಿತ ಸರ್ಜರಿಯಿಂದ ಈಕೆಯ ಮೂಗಿನ ತುದಿಯ ಅಂಗಾಂಶವೊಂದು ನಿಷ್ಕ್ರಿಯವಾಗಿದೆ. ಈ ಕಪ್ಪು ಕಲೆಗೆ ಇದೇ ಕಾರಣ ಎಂದು ಗೊತ್ತಾಗಿದೆ. ಈ ಬಗ್ಗೆ ವೈದ್ಯರನ್ನು ವಿಚಾರಿಸಿದಾಗ ಈ ಚಿಕಿತ್ಸೆ ಮಾಡಿದ ವೈದ್ಯರು ಕೂಡ ಸರ್ಜರಿ ಪರಿಣಿತರಲ್ಲ ಎಂದು ತಿಳಿದುಬಂದಿದೆ.
PublicNext
05/02/2021 07:14 pm