ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಮಿಕ್ರಾನ್ ಮಾರ್ಗಸೂಚಿ ಪ್ರಕಟ: ಸಿ.ಜಿ.ಆಸ್ಪತ್ರೆಯಲ್ಲಿ ಸಿದ್ಧತೆ ವೀಕ್ಷಿಸಿದ ಜಿಲ್ಲಾಧಿಕಾರಿ

ದಾವಣಗೆರೆ: ಕೊರೊ‌ನಾ ರೂಪಾಂತರಿ ಹೊಸ ವೈರಸ್ ಒಮಿಕ್ರಾನ್ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು,ಜಿಲ್ಲೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಗರದ ಸಿ.ಜೆ.ಆಸ್ಪತ್ರೆಯಲ್ಲಿ ಸಿದ್ದತೆಗಳನ್ನು ಪರಿಶೀಲಿಸಿದರು.

ಕಳೆದ ಎರಡು ಅಲೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಅನುಭವ ಬಳಸಿಕೊಂಡು ಒಮಿಕ್ರಾನ್ ತಡೆಗಟ್ಟುವ ಬಗೆಗೆ ಎಲ್ಲಾ ಸಾಧ್ಯತೆಗಳನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಡಿಸಿ ಮಹಾಂತೇಶ್ ಬೀಳಗಿ ತಿಳಿಸಿದರು.ಸಿ.ಜಿ.ಆಸ್ಪತ್ರೆಯಲ್ಲಿ ಬೆಡ್ ಗಳ ಸಾಮರ್ಥ್ಯ,ವೆಂಟಿಲೇಟರ್ ಗಳು, ಆಕ್ಸಿಜನ್ ಬೆಡ್ಸ್, ಆಕ್ಸಿಜನ್ ಪ್ಲಾಂಟ್ ಹಾಗೂ ಮಾನವ ಸಂಪನ್ಮೂಲದ ಬಗೆಗೆ ಮಾಹಿತಿ ಪಡೆದರು.

ಮಾಸ್ಕ್ ಧರಿಸುವಿಕೆಯನ್ನು ಮತ್ತಷ್ಟು ಕಡ್ಡಾಯಗೊಳಿಸುತ್ತಿದ್ದು ಸರ್ಕಾರ ನಿಗದಿಗೊಳಿಸಿರುವಂತೆ ನಗರ ಪ್ರದೇಶಗಳಲ್ಲಿ 250 ರೂ, ತಾಲೂಕು ಹಂತದಲ್ಲಿ 150 ರೂ ದಂಡ ವಿಧಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಜನಜಂಗುಳಿ ನಿಯಂತ್ರಿಸುವುದು, ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದರು. ಸಿ.ಜಿ.ಆಸ್ಪತ್ರೆಯ ಅಧೀಕ್ಷಕ ಡಾ. ಜಯಪ್ರಕಾಶ್ ಮತ್ತು ವೈದ್ಯರು ಇದ್ದರು.

Edited By : Nirmala Aralikatti
PublicNext

PublicNext

03/12/2021 07:21 pm

Cinque Terre

59.96 K

Cinque Terre

0

ಸಂಬಂಧಿತ ಸುದ್ದಿ