ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯರ ಎಡವಟ್ಟು : ಕಲ್ಲಿನ ಬದಲು ಕಿಡ್ನಿ ಹೊರ ತೆಗೆದರು, ರೋಗಿ ಸಾವು

ಅಹಮದಾಬಾದ್: ವೈದ್ಯೋ ನಾರಾಯಣೋ ಹರಿ ಎಂದು ವೈದ್ಯರ ಬಳಿ ಹೋಗುವ ಪ್ರತಿಯೊಬ್ಬ ರೋಗಿಯೂ ವೈದ್ಯರಲ್ಲಿ ದೇವರನ್ನುಕಂಡು ನನ್ನನ್ನು ಇವರು ಕಾಪಾಡುತ್ತಾರೆ ಎಂದು ನಿರ್ಭಯವಾಗಿರುತ್ತಾರೆ.ಆದ್ರೆ ಕೆಲವು ಸಂದರ್ಭಗಳಲ್ಲಿ ವೈದ್ಯರು ಮಾಡುವ ಎಡವಟ್ಟುಗಳು ಪ್ರಾಣಿಪಕ್ಷಿ ಹಾರಿಹೋಗುವಂತೆ ಮಾಡುತ್ತದೆ.

ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಬಾಲಸಿನೋರ್ ನಲ್ಲಿರುವ ಕೆಎಂಜಿ ಜನರಲ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ರೋಗಿಯೊಬ್ಬ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಕೆಎಂಜಿ ಜನರಲ್ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳಿನಿಂದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವ್ಯಕ್ತಿಯ ಕಿಡ್ನಿಯಲ್ಲಿ ಸ್ಟೋನ್ ಇದ್ದು, ಅದನ್ನು ತೆಗೆಯಲು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿ ಕಿಡ್ನಿಯಲ್ಲಿನ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ. ಇದರಿಂದ ರೋಗಿ ಮೃತಪಟ್ಟಿದ್ದಾನೆ.

ಡಾ. ಶಿವುಭಾಯಿ ಪಟೇಲ್ ನೇತೃತ್ವದ ತಂಡ ಅನೇಕ ವೈದ್ಯಕೀಯ ಪರೀಕ್ಷೆಗಳ ನಂತರ ಮೂತ್ರಪಿಂಡದಲ್ಲಿ ಕಲ್ಲು ಇರುವುದನ್ನ ಪತ್ತೆ ಮಾಡಿತ್ತು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಕಿಡ್ನಿಯನ್ನೇ ತೆಗೆದಿದ್ದಾರೆ. ಮೃತರ ಸಂಬಂಧಿಯ ಮನವಿಯನ್ನು ಆಲಿಸಿದ ಗುಜರಾತ್ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು, ಮೃತನ ಸಂಬಂಧಿಕರಿಗೆ 11.23 ಲಕ್ಷ ಪರಿಹಾರ ನೀಡುವಂತೆ ಕೆಎಂಜಿ ಜನರಲ್ ಆಸ್ಪತ್ರೆ ಆದೇಶಿಸಿದೆ.

Edited By : Nirmala Aralikatti
PublicNext

PublicNext

20/10/2021 05:38 pm

Cinque Terre

92.51 K

Cinque Terre

15