ದೆಹಲಿ : ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಅವರಿಗೆ ಬುಧವಾರ ಹೃದಯಾಘಾತವಾಗಿದೆ. ಜಿಮ್ ನ ಟ್ರೆಡ್ ಮಿಲ್ ನಲ್ಲಿ ವರ್ಕ್ ಮಾಡ್ತಿದ್ದಾಗ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ತರಬೇತುದಾರರು ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಏಮ್ಸ್ ಆಸ್ಪತ್ರೆಯ ಕಾರ್ಡಿಯಾಲಜಿ ಮತ್ತು ಎಮರ್ಜನ್ಸಿ ವಿಭಾಗದ ಡಾ.ನಿತೀಶ್ ನ್ಯಾಯ್ ನೇತೃತ್ವದಲ್ಲಿ ರಾಜು ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.
ಏಮ್ಸ್ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ, ಕಾಮಿಡಿಯನ್ ಗೆ ‘ಕಾರ್ಡಿಯಾಕ್ ಅರೆಸ್ಟ್’ ಆಗಿದೆ. ಅವರಿಗೆ ಎರಡು ಬಾರಿ CPR ಮಾಡಲಾಗಿದೆ ಎಂದು ತಿಳಿಸಿದೆ. ಇತ್ತ, ರಾಜು ಅವರ ಸಹೋದರ ಆಶಿಶ್ ಕೂಡ, ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಕಾನ್ಪುರ ಮೂಲದ ರಾಜು ಶ್ರೀವಾಸ್ತವ್, ‘ಉತ್ತರ ಪ್ರದೇಶ್ ಫಿಲ್ಮ್ ಬೋರ್ಡ್’ನ ಅಧ್ಯಕ್ಷರಾಗಿದ್ದಾರೆ.
PublicNext
11/08/2022 07:44 am