ಬೆಂಗಳೂರು: ಇತ್ತಿಚೆಗೆ ನಟಿಯರು ತಮ್ಮ ಬ್ಯೂಟಿ ಕಾಪಾಡಿಕೊಳ್ಳಲು ವೈದ್ಯರ ಮೊರೆ ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ನಟಿ ಚೇತನ ರಾಜ್ ಪ್ಯಾಟ್ ಸರ್ಜರಿಗೆ ಒಳಗಾಗಿ ಸಾವಿಗೀಡಾದ ಸುದ್ದಿ ಮಾಸುವ ಮುನ್ನವೇ ಮತ್ತೊಬ್ಬ ನಟಿ ಹಲ್ಲಿನ ಚಿಕಿತ್ಸೆಗೆ ಒಳಗಾಗಿ ಸೌಂದರ್ಯದ ಜೊತೆಗೆ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದಾಳೆ.
ಆಸ್ಪತ್ರೆಗಳಿಗೆ ಹೋಗುವ ಮುನ್ನ ಎಚ್ಚರ ವಹಿಸದಿದ್ರೆ ನಿಮಗೂ ಇಂಥಹ ಪರಿಸ್ಥಿತಿ ಬರಬಹುದು.ಸಿನಿಮಾ ಸಿರೀಯಲ್ ಅಂತ ನಟನೆ ಮಾಡಿಕೊಂಡು ರೀಲ್ಸ್ ನಲ್ಲಿ ಆಕ್ಟೀವ್ ಆಗಿದ್ದ ನಟಿ ಮುದ್ದಾಗಿ ರೀಲ್ಸ್ ಮಾಡಿಕೊಂಡಿದ್ದಳು.
ಸದ್ಯ ಆಕೆಯ ಪರಿಸ್ಥಿತಿ ನೋಡಿದ್ರೆ ನಿಜಕ್ಕೂ ರೀಲ್ಸ್ ನಲ್ಲಿ ಮತ್ತು ಸಿರೀಯಲ್ ನಲ್ಲಿ ನಟನೆ ಮಾಡ್ತಿದ್ದ ನಟಿ ಇವೆಳೇನಾ ಎನ್ನುವ ಮಟ್ಟಿಗೆ ಆಕೆ ವಿರೂಪಗೊಂಡಿದ್ದಾಳೆ.
ಇದಕ್ಕೆಲ್ಲಾ ಕಾರಣ ಹಲ್ಲು ನೋವು. ಹಲ್ಲು ನೋವಿನಿಂದ ಆಸ್ಪತ್ರೆಗೆ ಹೋಗಿದ್ದ ನಟಿ ಮುಖ ವಿರೂಪ ಮಾಡಿಕೊಂಡಿದ್ದಾಳೆ. ಈ ನಟಿ ಹೆಸ್ರು ಸ್ವಾತಿ, ಸ್ವಾತಿ ಸಿರೀಯಲ್ , ಸ್ಟೇಜ್ ಆ್ಯಂಕರ್ ಆಗಿದ್ದಳು. ಕಳೆದ ವಾರ ಹಲ್ಲು ನೋವು ಅಂತ ಜಯನಗರದ 5 ಸ್ಟಾರ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾಳೆ ಆದ್ರೆ ಆಸ್ಪತ್ರೆಯಲ್ಲಿ ಖಾಯಿಲೆ ವಾಸಿ ಮಾಡುವ ಬದಲು ಡಾಕ್ಟರ್ ಮಾಡಿದ ಎಡವಟ್ಟು ಈಗಾ ನಟಿ ಜೀವನವನ್ನೇ ಬರ್ಬಾದ್ ಮಾಡಿದೆ.
ಸ್ವಾತಿ ಈ ಸ್ಥಿತಿಗೆ ವೈದ್ಯರು ಅನಸ್ತೇಷಿಯಾ ಬದಲು ಮಾರಣಾಂತಿಕ ಇಂಜಕ್ಷನ್ ನೀಡಿದ್ರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಜಯನಗರದ ಖಾಸಗಿ ಡೆಂಟಲ್ ಕೇರ್ ಆಸ್ಪತ್ರೆಯ ಕರ್ಮಕಾಂಡ ಇದಾಗಿದ್ದು ಹಲ್ಲು ನೋವಿಗಾಗಿ ಆಸ್ಪತ್ರೆಗೆ ತೆರಳಿದ್ದ ನಟಿಗೆಅನಸ್ತೇಷಿಯಾ ಬದಲು ಸ್ಯಾಲಿಕ್ ಆ್ಯಸಿಡ್ ಇಂಜಕ್ಷನ್ ನೀಡಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದೆ.
ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದರೂ ಕೇರ್ ಮಾಡದೆ ನಿರ್ಲ್ಯಕ್ಷ ತೋರ್ತಿದ್ದಾರೆಂದು ಸ್ವಾತಿ ಆರೋಪಿಸಿದ್ದಾರೆ.
PublicNext
17/06/2022 06:34 pm