ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ತನ ಕ್ಯಾನ್ಸರ್ ನಿಂದ ಬಳಲಿದ ನಟಿ : ವಿಷಯ ತಿಳಿದು ಫ್ಯಾನ್ಸ್ ಶಾಕ್

ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ ಹಂಸ ನಂದಿನಿ ತಾವು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಲೆ ಕೂದಲಿಲ್ಲದ ಫೋಟೋ ಶೇರ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಈ ವಿಚಾರ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಟ್ವೀಟ್ ನಲ್ಲಿ .. ಜೀವನದಲ್ಲಿ ನಡೆಯುವ ಈ ಘಟನೆ ನನಗೆ ಅನ್ಯಾಯವೆಂದು ತೋರುತ್ತದೆಯಾದರೂ, ನಾನು ಬಲಿಪಶು ಆಗೋಕೆ ನಿರಾಕರಿಸುತ್ತೇನೆ. ನನಗೆ ನಾಲ್ಕು ತಿಂಗಳ ಹಿಂದೆ ಸ್ತನ ಕ್ಯಾನ್ಸರ್ ಪತ್ತೆ ಆಯಿತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಾನು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಪಡಬೇಕಾಗುತ್ತದೆ. ಎಲ್ಲಾ ಅಪಾಯಗಳನ್ನು ತೊಡೆದುಹಾಕುವುದು ಅಸಾಧ್ಯ. ಈ ಕ್ಯಾನ್ಸರ್ ಎಂಬ ಅಪಾಯವು ನಾನು ಬದುಕಿರುವವರೆಗೂ ಇರುತ್ತದೆ. ನಾನು ಈಗಾಗಲೇ 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಈ ಥೆರಪಿಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

2004ರಲ್ಲಿ ಹಂಸ ಚಿತ್ರರಂಗಕ್ಕೆ ಕಾಲಿಟ್ಟರು. 2006ರಲ್ಲಿ ಕನ್ನಡದ ಮೋಹಿನಿ ಸಿನಿಮಾ ಮೂಲಕ ಅವರು ಸ್ಯಾಂಡಲ್ ವುಡ್ ಗೂ ಕಾಲಿಟ್ಟರು. ಪ್ರಭಾಸ್ ನಟನೆಯ ಮಿರ್ಚಿ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರೆ, ಸುದೀಪ್ ಅಭಿನಯದ ಈಗ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಬಳಿಕ ಅನಾರೋಗ್ಯದಿಂದಾಗಿ ಸಿನಿಮಾ, ಸೋಶಿಯಲ್ ಮೀಡಿಯಾಗಳಿಂದ ದೂರವಾಗಿದ್ದರು.

Edited By : Nirmala Aralikatti
PublicNext

PublicNext

20/12/2021 03:50 pm

Cinque Terre

79.47 K

Cinque Terre

1

ಸಂಬಂಧಿತ ಸುದ್ದಿ