ಚೆನ್ನೈ: ವೈರಲ್ ಫೀವರ್ನಿಂದ ಬಳಲುತ್ತಿರುವ ತಮಿಳುನಾಡಿನ ಖ್ಯಾತ ನಟ ಸಿಂಬು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾಲಿವುಡ್ನ ಖ್ಯಾತ ನಟರಾಗಿರುವ ಸಿಂಬು ಅಲಿಯಾಸ್ ಸಿಲಂಬರಸನ್ ಕಳೆದ ಕೆಲ ದಿನಗಳಿಂದ ಹೊಸ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಇದರ ಬೆನ್ನಲ್ಲೇ ಅವರಿಗೆ ವೈರಲ್ ಸೋಂಕು ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ತೀವ್ರ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ತೆರಳಿದ್ದರು. ವೈರಲ್ ಸೋಂಕು ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ.
PublicNext
11/12/2021 08:11 pm