ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ಅಕಾಲಿಕ ನಿಧನ : ಹೆಚ್ಚಾಯಿತು ಹೃದಯದ ಕಾಳಜಿ

ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಬೆನ್ನಲ್ಲೇ ಜನ ತಮ್ಮ ಹೃದಯದ ಕಾಳಜಿ ಹೆಚ್ಚಿಗೆ ಮಹತ್ವ ನೀಡುತ್ತಿದ್ದಾರೆ. ಹೌದು ಪುನೀತ್ ಹಠಾತ್ ವಿಧಿವಶವಾಗಿರುವುದರಿಂದ ಜನ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಅದರಲ್ಲೂ ಹೃದಯ ಸಂಬಂಧ ತಪಾಸಣೆಗೆ ಜನ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ. ಇಂದು ಬೆಂಗಳೂರು ಜಯದೇವ ಆಸ್ಪತ್ರೆಗೆ ನಿರೀಕ್ಷೆಗೂ ಮೀರಿ ಆಗಮಿಸುತ್ತಿರುವ ಜನ ಹೃದಯ ತಪಾಸಣೆ ಮುಂದಾಗುತ್ತಿದ್ದಾರೆ.

ಇನ್ನು ಸಣ್ಣಪುಟ್ಟ ಸಮಸ್ಯೆ ಇರುವವರಿಂದಲೂ ಹೃದಯ ತಪಾಸಣೆ ಬೇಡಿಕೆ ಹೆಚ್ಚಿದೆ. ಜಯದೇವ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಇಂದು ದಿಢೀರ ಏರಿಕೆಯಾಗಿದೆ. ದಿನನಿತ್ಯ 1200 ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು ಆದರೆ ಕಳೆದೆರಡು ದಿನಗಳಿಂದ ಈ ಸಂಖ್ಯೆ ಹೆಚ್ಚಿದೆ 1500ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

01/11/2021 02:21 pm

Cinque Terre

91.25 K

Cinque Terre

4