ನವದೆಹಲಿ : ಸದ್ಯ ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಭಾರಿ ಸುದ್ದಿಯಾಗಿದ್ದಾರೆ.
ಅದು ಯಾಕೆ ಅಂತಿರಾ ಇಲ್ಲಿದೆ ನೋಡಿ ಮಾಹಿತಿ ಎಸ್ ನಾನು ಪ್ರತಿಜ್ಞೆ ಮಾಡಿರುವ ಅಂಗದಾನಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಳ್ಳುವ ಮೂಲಕ ಭರಪೂರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನೈಸರ್ಗಿಕ ವಿಪತ್ತು ಅಥವಾ ಯಾವುದೇ ಕಷ್ಟಕರ ಪರಿಸ್ಥಿತಿಯ ಸಂದರ್ಭಗಳಲ್ಲಿ ಮುಂದೆ ಬಂದು ಅನೇಕ ರೀತಿಯ ಸಹಾಯಹಸ್ತ ಚಾಚುತ್ತಿರುವ ಬಿಗ್-ಬಿ ಇದೀಗ ತಮ್ಮ ಅಂಗವನ್ನು ದಾನ ಮಾಡುವುದಾಗಿ ಘೋಷಣೆ ಮಾಡಿರುವುದು ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.
ತಾವು ಅಂಗದಾನ ಮಾಡಲು ನಿರ್ಧರಿಸಿರುವುದಾಗಿ ಅವರು ಟ್ವಿಟರ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ.
ಇದಕ್ಕೆ ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಹೇಳಿದ್ದಾರೆ.
ತಮ್ಮ ಫೋಟೋ ಒಂದನ್ನು ಅಪ್ಲೋಡ್ ಮಾಡಿರುವ ಅಮಿತಾಭ್ ಅವರು, ಕೋಟ್ ಮೆಲೆ ಹಸಿರು ರಿಬ್ಬನ್ ಧರಿಸಿದ್ದಾರೆ.
ನಾನು ಅಂಗಾಂಗ ದಾನ ಮಾಡ್ತಿದ್ದೇನೆ. ಅದರ ಪವಿತ್ರತೆಗಾಗಿ ಈ ರಿಬ್ಬನ್ ಧರಿಸಿದ್ದೇನೆ ಎಂದು ಅದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
I am a pledged ORGAN DONOR .. I wear the green ribbon of its sanctity
(ನಾನು ನಾನು ಪ್ರತಿಜ್ಞೆ ಮಾಡಿರುವ ಅಂಗದಾನಿ, ಅದರ ಪವಿತ್ರತೆಯನ್ನು ಸಾರುವ ಸಲುವಾಗಿ ಈ ಹಸಿರು ರಿಬ್ಬನ್ ಧರಿಸಿದ್ದೇನೆ ಎಂದಿದ್ದಾರೆ.
ಮಾತ್ರವಲ್ಲದೇ ಇದಾಗಲೇ ಕೆಲವರು ತಾವು ಅಂಗಾಂಗದಾನದ ಕುರಿತಂತೆ ಪಡೆದಿರುವ ದಾಖಲೆಗಳನ್ನೂ ಹಂಚಿಕೊಂಡಿದ್ದಾರೆ.
PublicNext
01/10/2020 02:58 pm