ಮುಂಬೈ:ಭರತನಾಟ್ಯ ಕಲಾವಿದೆ ಮತ್ತು ನಟಿ ಶೋಭನಾ ಅವರಿಗೆ ಒಮಿಕ್ರಾ ಸೋಂಕು ತಗುಲಿರೋದು ಧೃಢಪಟ್ಟಿದೆ. ಸ್ವತಃ ಶೋಭನಾ ಅವರೇ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಖಾತೆ ಮೂಲಕವೇ ಶೋಭನಾ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ಗಂಟಲು ಕೆರೆತ,ಗಂಟಲು ನೋವು,ಕೀಲು ನೋವು,ಶೀತ ಕಾಣಿಸಿಕೊಂಡಿತ್ತು. ಈಗ ದಿನೇ ದಿನೇ ಎಲ್ಲವೂ ಕಡಿಮೆ ಆಗುತ್ತಿದೆ ಅಂತಲೇ ಬರೆದುಕೊಂಡಿದ್ದಾರೆ.
ನನಗೆ ಒಮಿಕ್ರಾನ್ ಆಗಿದೇನೋ ಸರಿ, ನಿಮಗೂ ಈ ತೊಂದರೆ ಆಗಲೇಬಾರದು ಅಂದ್ರೆ ಜಾಗೃತರಾಗಿಯೇ ಇರಿ ಎಂದೇ ಶೋಭನಾ ಎಲ್ಲರಿಗೂ ಕೇಳಿಕೊಂಡಿದ್ದಾರೆ.
PublicNext
10/01/2022 04:49 pm