ಜೀನೆವಾ: ಇಡೀ ಜಗತ್ತನ್ನ ಕೊರೊನಾ ಕಾಡ್ತಾನೇ ಇದೆ. ಅದರ ರೂಪಾಂತರಿಗಳಾದ ಒಮಿಕ್ರಾನ್ ಮತ್ತು ಡೆಲ್ಟಾ ಕೂಡ ಅತಿ ಶೀಘ್ರದಲ್ಲಿಯೇ ಆವರಿಸಿಕೊಳ್ಳಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಈಗ ಎಚ್ಚರಿಕೆ ಕೊಟ್ಟಿದ್ದಾರೆ.
ಒಮಿಕ್ರಾನ್ ಸೋಂಕಿನ ಲಕ್ಷಣಗಳು ಈಗ ಅಷ್ಟೇನೂ ಭಾರಿ ಪ್ರಮಾಣದಲ್ಲಿ ಇಲ್ಲ ಅಂತ ಈಗೇನೋ ಹೇಳಬಹುದು. ಆದರೆ ಅದರ ರೂಪ ದಿನೇ ದಿನ ಬದಲಾಗುವುದನ್ನ ತಳ್ಳಿ ಆಕುವ ಹಾಗೇ ಇಲ್ಲ.ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಒಮಿಕ್ರಾನ್ ಈಗ ಅಮೆರಿಕಾ ಮತ್ತು ಐರೋಪ್ ದೇಶಗಳಲ್ಲೂ ಕಂಡು ಬಂದಿದೆ ಎಂದು ಟೆಡ್ರೋಸ್ ವಿವರಿಸಿದ್ದಾರೆ.
ಒಮಿಕ್ರಾನ್ ಅಟ್ಟಹಾಸ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಆಗಲಿದೆ. ಕೊರೊನಾ ಸುನಾಮಿಯನ್ನೂ ಮೀರಿಸೋ ಹಾಗೇನೆ ಇದೆ ಅಂತಲೇ ಟೆಡ್ರೋಸ್ ಎಚ್ಚರಿಕೆ ನೀಡಿದ್ದಾರೆ.
PublicNext
31/12/2021 11:09 am