ಮಂಡ್ಯ: ಇಲ್ಲಿಯ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಒಂದೇ ಕುಟುಂಬದ 6 ಜನ ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕಿ, ಇವರ ಮನವೊಲಿಸಿ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.
ಚಾಮನಹಳ್ಳಿಯ ದಲಿತ ಕಾಲೋನಿಯ ರಾಜೇಶ್ ಕುಟುಂಬದ 6 ಜನ ಸದಸ್ಯರು ಇಲ್ಲಿವರೆಗೂ ಒಂದೇ ಒಂದು ಡೋಸ್ ಲಸಿಕೆಯನ್ನ ಹಾಕಿಸಿಕೊಂಡಿಲ್ಲ. ಇದನ್ನ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಇವತ್ತು ಲಸಿಕೆ ಹಾಕಿಸಲು ಇವರ ಮನೆಗೆ ತೆರಳಿದ್ದಾರೆ,
ಆದರೆ, ಇದನ್ನ ಕ್ಯಾರೇ ಮಾಡದ ಮನೆಯ ಸದಸ್ಯರು ಮನೆ ಬಾಗಿಲು ಹಾಕಿಕೊಂಡು ಮನೆಯಲ್ಲಿಯೇ ಇದ್ದರು. ಕೊನೆಗೆ ಬಾರಿ ಹರಸಾಹಸ ಪಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ,ಆಶಾ,ಅಂಗನವಾಡಿ ಕಾರ್ಯಕರ್ತರು ಮನವೊಲಿಸಿ ಲಸಿಕೆ ಹಾಕೋವಲ್ಲಿ ಯಶಸ್ವಿಯಾಗಿದ್ದಾರೆ.
PublicNext
11/11/2021 10:12 am