ಕಲಬುರಗಿ: ನಗರದ ಕೆನರಾ ಬ್ಯಾಂಕಿನಲ್ಲಿ ಜನರೇಟರ್ ಸ್ಫೋಟ ಸಂಭವಿಸಿ ಅಗ್ನಿ ಅವಘಡ ನಡೆದಿತ್ತು. ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಕಡಿಮೆ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ.
ರಮೇಶ್ ಪವಾರ್ (56) ಎಂಬುವವರೇ ಮೃತಪಟ್ಟ ಅಗ್ನಿಶಾಮಕ ಸಿಬ್ಬಂದಿ. ಬೆಂಕಿ ನಂದಿಸುವಾಗ ರಮೇಶ್ ಅವರಿಗೆ ಏಕಾಏಕಿ ಕಡಿಮೆ ರಕ್ತದೊತ್ತಡ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಮೇಶ್ ಪವಾರ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
PublicNext
26/12/2021 10:32 pm