ಬೆಂಗಳೂರು: ಕೊರೊನಾ ಸೋಂಕು ಪತ್ತೆಗಾಗಿ ಸರ್ಕಾರ ಆ್ಯಂಟಿಜನ್ rapid ಟೆಸ್ಟ್ ಮೊರೆ ಹೋಗಿತ್ತು.
ಇದರಿಂದಾಗಿ ಕೇವಲ 20 ನಿಮಿಷದಲ್ಲಿ ರಿಸಲ್ಟ್ ನೀಡುವ ಆ್ಯಂಟಿಜನ್ ಟೆಸ್ಟ್ ಕೈ ಬಿಡಲು ಸರ್ಕಾರ ಮುಂದಾಗಿದೆ.
ಹೌದು ಸೋಂಕನ್ನು ವೇಗವಾಗಿ ಪತ್ತೆ ಆ್ಯಂಟಿಜನ್ rapid ಟೆಸ್ಟ್ ಸಹಾಯಕಾರಿ ಎನ್ನಲಾಗುತ್ತಿತ್ತು ಆದರೆ ಈ ಟೆಸ್ಟ್ ನಿಖರವಾಗಿ ಸೋಂಕಿತರನ್ನ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ.
ಹೀಗಾಗಿ ಕಳೆದ ಕೆಲ ದಿನಗಳಿಂದ ಬಿಬಿಎಂಪಿ ಅಧಿಕಾರಿಗಳು rapid ಟೆಸ್ಟ್ ಕಡಿಮೆ ಮಾಡಿದ್ದಾರೆ.
ಸಾಮಾನ್ಯ ಜ್ವರದ ಲಕ್ಷಣಗಳು ಇದ್ದರೂ ಪಾಸಿಟಿವ್ ಎಂದೇ ರಿಸಲ್ಟ್ ತೋರಿಸುತ್ತಿದೆ. ಆ್ಯಂಟಿಜನ್ ಕಿಟ್ ಮೂಲಕ ಪರೀಕ್ಷೆಗೆ ಒಳಪಟ್ಟಿ ಪಾಸಿಟಿವ್ ಬಂದವರನ್ನ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರ್ತಿದೆ.
ಪಾಸಿಟಿವ್, ನೆಗೆಟಿವ್ ಕೇಸ್ ಗಳ ಗೊಂದಲದ ಕಾರಣಕ್ಕೆ ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಗರದಲ್ಲಿ ನಿತ್ಯ ಶೇ.40 ರಷ್ಟು ಆ್ಯಂಟಿಜನ್ ಟೆಸ್ಟ್ ಮಾಡುವ ಮೂಲಕ ಸೋಂಕಿತರ ಪತ್ತೆ ಮಾಡಲಾಗುತ್ತಿತ್ತು.
ಇದರಿಂದ ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿತ್ತು. ಆದ್ರೆ ಅಸಲಿ ಸೋಂಕಿತರು ಪತ್ತೆಯಾಗದ ಕಾರಣ ಈಗಾಗಲೇ ಶೇ.25 ರಷ್ಟು ಆ್ಯಂಟಿಜನ್ ಟೆಸ್ಟ್ ಕಡಿಮೆ ಮಾಡಲಾಗಿದೆ.
PublicNext
28/10/2020 09:55 am