ಹಾವೇರಿ: ಹಾವೇರಿಯ ಶಿವಲಿಂಗನಗರದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ 21 ವರ್ಷ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ. ಈ ವರ್ಷದ ಜಾತ್ರಾ ವಿಶೇಷ ಪಲ್ಲೇದ ಹಬ್ಬವನ್ನ ಗುರುವಾರ ಆಚರಿಸಲಾಯಿತು. ಸುಮಾರು 108 ತರಕಾರಿಗಳಿಂದ ಬನಶಂಕರಿ ಮೂರ್ತಿಯನ್ನ ಅಲಂಕರಿಸಿದ್ದು ಈ ಪಲ್ಲೇದ ಹಬ್ಬದ ವಿಶೇಷ.
ನೂರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಬರಗಾಲ ತಾಂಡವಾಡುತ್ತಿರುವ ವೇಳೆ ಋಷಿಮುನಿಗಳು ದೇವಿಯಲ್ಲಿ ಪ್ರಾರ್ಥನೆ ಮಾಡಿದರಂತೆ. ಬನಶಂಕರಿದೇವಿ ಋಷಿಮೂನಿಗಳ ಪ್ರಾರ್ಥನೆಗೆ ಒಲೆದು ದೇಹದ ಉಷ್ಣಾಂಶ ಹೆಚ್ಚಿಸಿಕೊಂಡು ಶಾಖಾಂಬರಿಯಾಗುತ್ತಾಳೆ. ಅಲ್ಲದೆ ಬರದಿಂದ ತತ್ತರಿಸಿದ ಭೂಮಿಗೆ ಮಳೆ ತರುತ್ತಾಳೆ. ಈ ರೀತಿ ತಂದ ಮಳೆಯಲ್ಲಿ ಬೆಳೆದ ತರಕಾರಿಗಳನ್ನು ದೇವಿಗೆ ಅಲಂಕಾರ ಮಾಡಲಾಗುತ್ತದೆ. ಅಂದಿನಿಂದ ಇದಕ್ಕೆ ಪಲ್ಲೇದ ಹಬ್ಬ ಎಂದು ಕರೆಯಲಾಗುತ್ತದೆ.
ಬದನೆಕಾಯಿ,ಸವತೆಕಾಯಿ, ಹಿರೇಕಾಯಿ, ಬಿನ್ಸ್, ಅವರೇ, ಮೆಣಸಿನಕಾಯಿ, ಸಾಂಬಾರಸವತೆ, ಹೂಕೋಸು, ಈರುಳ್ಳಿ, ಗಜ್ಜರಿ, ಮೂಲಂಗಿ, ಆಲೂಗಡ್ಡೆ, ಶುಂಠಿ ಬೆಟ್ಟದ ನೆಲ್ಲಿಕಾಯಿ ಸರದಿಂದ ಬನಶಂಕರಿದೇವಿಯನ್ನ ಅಲಂಕರಿಸಲಾಗಿದೆ. ಕುಂಬಳಕಾಯಿ, ಎಳೆಯ ಮೆಕ್ಕೆಜೋಳದ ತೆನೆಗಳು, ಮೂಲಂಗಿಗಡ್ಡೆ, ಸೀಮೆಬದನೆಕಾಯಿ, ಡೊಣ್ಣಗಾಯಿ ಸೇರಿದಂತೆ ನಾನಾ ಬಗೆಯ ತರಕಾರಿಗಳಿಂದ ಮಾಲೆಗಳನ್ನ ತಯಾರಿಸಿ ದೇವಿಗೆ ಅಲಂಕರಿಸಲಾಗಿತ್ತು.
PublicNext
24/01/2025 08:55 am