ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮಂತ್ರೋಡಿ ಗ್ರಾಮ ಜಾತ್ರೋತ್ಸವ- ಇಲ್ಲಿ ಪಾರ್ವತಿ ದೇವಿ ರಥ ಎಳೆಯುವವರು ಮಹಿಳೆಯರು ಮಾತ್ರ!

ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತದೆ. ಮಠದಲ್ಲಿ ಪ್ರತಿವರ್ಷ ಅಮವಾಸ್ಯೆ ದಿನ ಶಿವ ದೇವರ ರಥೋತ್ಸವ ನಡೆದರೆ ಮರುದಿನ ಪಾರ್ವತಿ ದೇವಿ ರಥೋತ್ಸವ ನಡೆಯುತ್ತೆ.

ಮೊದಲ ದಿನ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವದಲ್ಲಿ ಪುರುಷರು ರಥ ಎಳೆದು ಸಂಭ್ರಮಿಸಿದರೆ ಮರುದಿನ ನಡೆಯುವ ಪಾರ್ವತಿ ದೇವಿ ರಥೋತ್ಸವದಲ್ಲಿ ಮಹಿಳೆಯರು ಮಾತ್ರ ರಥ ಎಳೆಯುತ್ತಾರೆ. ಕಳೆದ ಶತಶತಮಾನದಿಂದಲೂ ಇಲ್ಲಿ ಈ ಸಂಪ್ರದಾಯ ಪಾಲಿಸುತ್ತಾ ಬರಲಾಗುತ್ತಿದೆ.

ಕೆಂಜಡೇಶ್ವರ ಮಠದಿಂದ ಪಾದಗಟ್ಟೆಯವರಿಗೆ ಮತ್ತು ಪಾದಗಟ್ಟಿಯಿಂದ ಮಠದವರೆಗೆ ಸುಮಾರು 800 ಮೀಟರ್ ದೂರದಷ್ಟು ಮಹಿಳೆಯರೇ ರಥ ಎಳೆದು ಸಂಭ್ರಮಿಸುತ್ತಾರೆ. ಅದು ಪಾದಗಟ್ಟಿಯಿಂದ ಮಠಕ್ಕೆ ಹೋಗುವ ದಾರಿ ಬೆಟ್ಟದ ಮೇಲಿದ್ದರೂ ಸಹ ಮಹಿಳೆಯರು ರಥ ಎಳೆದು ಖುಷಿ ಪಡುತ್ತಾರೆ.

Edited By : Shivu K
PublicNext

PublicNext

01/02/2025 01:34 pm

Cinque Terre

22.72 K

Cinque Terre

0